ತಾಲ್ಲೂಕಿನ ಛಾಯಾಗ್ರಾಹಕರ ನಾಡಿಮಿಡಿತವಾಗಿದ್ದ *ವಿಜ್ ಗೋಪಾಲ್ ಹ್ರದಯಾಘಾತಕ್ಕೆತುತ್ತಾಗಿ ಹಟಾತ್ ನಿಧನ

ಎಂದಿನಂತೆ ಊರಿಗೆ ಬಂದಿದ್ದ ಗೋಪಾಲ್ ವಾಪಾಸ್ ಹೋಗುವಾಗ ಮಾರ್ಗಮದ್ಯೆ ಬಸ್ಸಿನಲ್ಲೇ ಹೃದಯಾಘಾತವಾಗಿ, ಸಹಪ್ರಯಾಣಿಕರು ಗಮನಿಸಿ ಕಂಡಕ್ಟರ್ ಗೆ ವಿಷಯ ತಿಳಿಸಿದ್ದಾರೆ, ತಕ್ಷಣವೇ ಸಮೀಪದಲ್ಲಿರುವ ಆಸ್ಪತ್ರೆಗೆ ಬಸ್ಸನ್ನು ತೆಗೆದುಕೊಂಡು ಹೋಗಿ ಸೇರಿಸಿದರೂ ಪ್ರಯೋಜನವಾಗದೆ ನಿಧನರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಹಕ ಸಂಘ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಅಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷರಾದ ನಾಗೇಶ್, ಸಂಪತ್, ರವಿಕುಮಾರ್, ಭಾಸ್ಕರ್, ಹಲವಾರು ಛಾಯಾಗ್ರಾಹದೊಂದಿಗೆ ಮೃತರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು.
ಮೃತರ ಹುಟ್ಟೂರಾದ ಹೊಸದುರ್ಗ ತಾಲ್ಲೂಕು ಹೊನ್ನೇಕೆರೆ ಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ.
Comments