ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ, ಕರ್ನಾಟಕ ಸರ್ಕಾರ ಮತ್ತು ದೇವಾಂಗ ಮಂಡಲಿ ದೊಡ್ಡಬಳ್ಳಾಪುರ, ಇವರ ವತಿಯಿಂದ ಯಶಸ್ವಿಯಾಗಿ ನಡೆದ ಅಂಕುರಾರ್ಪಣೆ ಕಾರ್ಯಕ್ರಮ.
ದಿ.೨೦ರ ಭುದವಾರ ರಾತ್ರಿ ೭.೩೦ಕ್ಕೆ ದೇವಸ್ಥಾನದ ಪುರೋಹಿತರು, ಆಡಳಿತ ಮಂಡಲಿ ಅಧಿಕಾರಿಗಳು ಮತ್ತು ದೇವಾಂಗ ಮಂಡಲಿ ಇವರ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಘಾಟಿಯಲ್ಲಿ ಬ್ರಹ್ಮರಥೋತ್ಸವದ ಪ್ರಾರಂಭಿಕ ಕರ್ಯಕ್ರಮವಾಗಿ ಅಂಕುರಾರ್ಪಣೆ ಮತ್ತು ಧ್ವಜಾರೋಹಣ ನಡೆಯಿತು. ದೇವಾಂಗ ಮಂಡಲಿ ಅಧ್ಯಕ್ಷ ವಿ.ತಿಮ್ಮಶೆಟ್ಟಪ್ಪ, ಉಪಾಧ್ಯಕ್ಷ ಚಿಕ್ಕಣ್ಣ, ನಿರ್ದೇಶಕರಾದ ಅಖಿಲೇಶ, ಪ್ರಭಾಕರ್, ರಘು, ನಟರಾಜ್,ಖಜಾಂಚಿ ಸನಾತ ಮೂರ್ತಿ ಮತ್ತು ಪದಾಧಿಕಾರಿಗಳು, ಊರಿನ ದೇವಾಂಗ ಸಮಾಜದ ಹಿರಿಯರು ಭಾಗವಹಿಸಿದ್ದರು.
Comments