ಕೆಂಪಯ್ಯ ವಿರುದ್ಧ ಬಾಂಬ್ ಸಿಡಿಸಿದ ಎಚ್ ಡಿಕೆ
ಎರಡು ಸಾವಿರ ಕೋಟಿ ಹಗರಣ ಬಯಲು ಮಾಡುತ್ತೇನೆ ಅನ್ನೋದು ಹಿಟ್ ಆ್ಯಂಡ್ ರನ್ ಅಲ್ಲ. ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡೇ ಮಾತಾಡ್ತಾ ಇದ್ದೇನೆ, ದಾಖಲಾತಿಗಳನ್ನು ತೋರಿಸಿ, ಆದಷ್ಟು ಬೇಗ ಬಿಡುಗಡೆ ಮಾಡುತ್ತೇನೆ ಅಂತ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು, ಕೆಂಪಯ್ಯ ಒಬ್ಬ ಫ್ರಾಡ್, ಸುಳ್ಳು ದಾಖಲೆ ಕೊಟ್ಟು ಕೆಲಸಕ್ಕೆ ಸೇರಿದ ವ್ಯಕ್ತಿ. ಅವರ ಮೂಲಕ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ.ಮೈಸೂರು ಮಿನರಲ್ಸ್ ನಲ್ಲಿ ನಡೆದ ಅವ್ಯವಹಾರವನ್ನು ಅತಿ ಶೀಘ್ರದಲ್ಲಿ ಬಯಲು ಮಾಡುತ್ತೇನೆ. ಲೆಕ್ಕ ತೋರಿಸದೆ 10 ಲಕ್ಷ ಮೆಟ್ರಿಕ್ ಟನ್ ಅದಿರು ಸಾಗಣೆ ಮಾಡಿದ್ದಾರೆ. ಇದರಲ್ಲಿ ನೇರವಾಗಿ ಸಿಎಂ ಹಸ್ತಕ್ಷೇಪ ಇದೆ. 2 ಸಾವಿರ ಕೋಟಿ ರೂ. ಹಗರಣ ಇದು. ಅಕ್ರಮವಾಗಿ ಅದಿರನ್ನು ಜಿಂದಾಲ್ಗೆ ಸಾಗಣೆ ಮಾಡಿದ್ದಾರೆ. ಎಂಎಂಎಲ್ನಲ್ಲಿ ನಡೆದ ಈ ಹಗರಣವನ್ನು ಶೀಘ್ರದಲ್ಲಿ ಬಯಲು ಮಾಡುತ್ತೇನೆ ಎಂದು ಸಿಎಂಗೆ ಎಚ್ಚರಿಕೆ ನೀಡಿದರು.
Comments