ಜೆಡಿಎಸ್ ಲಿಸ್ಟ್ ನಲ್ಲಿ ಯಾರ ಯಾರ ಹೆಸರು ಫೈನಲ್ ಆಗಿದೆ ಗೊತ್ತಾ?

19 Dec 2017 9:51 AM |
10659 Report

2018 ರಾಜ್ಯ ಮಹಾ ಸಂಗ್ರಾಮಕ್ಕೆ ತೆನೆ ಹೊತ್ತ ಮಹಿಳೆ ರೆಡಿ, ವಿಧಾನ ಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಲಿಸ್ಟ್ ಫೈನಲ್. ಜೆಡಿಎಸ್ ನ ಉನ್ನತ ಮೂಲಗಳಿಂದ ಈಗಾಗಲೇ ಯಾರನ್ನೆಲ್ಲಾ ಯಾವ ಯಾವ ಕ್ಷೇತ್ರಗಳಿಗೆ ವಿಂಗಡಣೆ ಮಾಡಲಾಗಿದೆ ಅಥವಾ ಟಿಕೆಟ್ ನ್ನು ಫೈನಲ್ ಮಾಡಲಾಗಿದೆ ಎಂಬುದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಫೈನಲ್ ಆಗಿರುವ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಿಗೆ ತೆರೆಳುವಂತೆ ವರಿಷ್ಠರ ಸೂಚನೆ. ಜೆಡಿಎಸ್ ಲಿಸ್ಟ್ ನಲ್ಲಿ ಯಾರ ಯಾರ ಹೆಸರು ಫೈನಲ್ ಆಗಿದೆ ಗೊತ್ತಾ...?

ಒಂದು ಕಡೆ ಕಾಂಗ್ರೆಸ್ ಹಾಗು ಬಿಜೆಪಿ ಗೆ ಟಾಂಗ್ ಕೊಡಬೇಕು. ನಾವು ಯಾರಿಗೂ ಕಮ್ಮಿಯಿಲ್ಲ ಎಂಬ ಮನೋಭಾವನೆಯಲ್ಲಿ ಜೆಡಿಎಸ್ ಇದೆ. ಹಾಗಾಗಿ ಜೆಡಿಎಸ್ ವರಿಷ್ಠರಾಗಿರುವ ದೇವೇಗೌಡರು ಒಂದು ಲಿಸ್ಟ್ ರೆಡಿ ಮಾಡಿದ್ದಾರೆ. ಮಹಾಸಮರಕ್ಕೆ ಜೆಡಿಎಸ್ ಕದನ ಕಲಿಗಳ ಹೆಸರು ಫೈನಲ್. 70 ಹೆಚ್ಚು ಅಭ್ಯರ್ಥಿಗಳ ಹೆಸರು ಅಂತಿಮ. ರಾಜರಾಜೇಶ್ವರಿ ನಗರ - ನಾರಾಯಣ ಸ್ವಾಮಿ ಗೆ ಟಿಕೆಟ್ , ಮಾಗಡಿ ಕ್ಷೇತ್ರದಿಂದ ಡಿ.ಸಿ. ತಮ್ಮಣ್ಣ, ಸೊರಬ - ಎಸ್. ಮಧು ಬಂಗಾರಪ್ಪ , ದೇವನ ಹಳ್ಳಿ - ಪಿಳ್ಳ ಮುನಿಸ್ವಾಮಿ , ಜಿಟಿ ದೇವೇಗೌಡ- ಚಾಮುಂಡೇಶ್ವರಿ ಕ್ಷೇತ್ರ, ರವೀಂದ್ರ ಶ್ರೀಕಂಠಯ್ಯ - ಶ್ರೀರಂಗ ಪಟ್ಟಣ, ಎನ್ ಎಚ್ ಕೋನರೆಡ್ಡಿ - ನವಲಗುಂದ, ಕೆ. ಗೋಪಾಲಯ್ಯ - ಮಹಾಲಕ್ಷ್ಮಿಲೇಔಟ್, ಟಿ. ಎನ್. ಜಯರಾಯಿ ಗೌಡ - ಯಶವಂತಪುರ, ವೈ.ಎಸ್. ವಿ. ದತ್ತಾ - ಕಡೂರು, ಎಂ. ಪಿ. ಸಿ. ಪುಟ್ಟರಾಜು - ಮೇಲು ಕೋಟೆ, ಎಚ್. ವಿಶ್ವನಾಥ್ - ಹುಣಸೂರು, ಪ್ರೊ. ಕೆ.ಆರ್. ರಂಗಪ್ಪ - ಚಾಮರಾಜ ನಗರ, ನಾರಾಯಣ ಗೌಡ - ಕೆಆರ್ ಪೇಟೆ, ಕೆ.ಎಂ. ಶಿವಲೆಂಗೇಗೌಡ - ಅರಸೀಕೆರೆ, ಸಿ.ಎನ್. ಬಾಲಕೃಷ್ಣ - ಶ್ರಾವಣ ಬೆಳಗೊಳ, ಎಚ್.ಎಸ್. ಪ್ರಕಾಶ್ - ಹಾಸನ, ಎಚ್. ಕೆ. ಕುಮಾರಸ್ವಾಮಿ - ಸಕಲೇಶಪುರ,

ಎ.ಟಿ. ರಾಮಸ್ವಾಮಿ - ಅರಕಲಗೂಡು, ಸುರೇಶಗೌಡ - ನಾಗಮಂಗಲ, ಡಾ. ಕೆ ಶ್ರೀನಿವಾಸ್ ಮೂರ್ತಿ - ನೆಲಮಂಗಲ , ಬಿ.ಮುನೇಗೌಡ - ದೊಡ್ಡಬಳ್ಳಾಪುರ, ಕೆ. ಎಸ್ ಮಂಜುನಾಥ್ ಗೌಡ - ಮಾಲೂರು , ಎಂ ರಾಜಣ್ಣ - ಶಿಡ್ಲಘಟ್ಟ , ಎಂ ಕೃಷ್ಣಾರೆಡ್ಡಿ - ಚಿಂತಾಮಣಿ, ರಾಜೇಂದ್ರ - ಕೆಜಿಎಫ್, ಗೌರಿ ಶಂಕರ್ - ತುಮಕೂರು ಗ್ರಾಮಾಂತರ, ಮಾಜಿ ಸಚಿವ ಗೋವಿಂದ ಗೌಡರ ಪುತ್ರ ವೆಂಕಟೇಶ್- ಶೃಂಗೇರಿ, ಬಂಡಪ್ಪ ಕಾಶಂಪೂರ್ - ಬೀದರ್ ದಕ್ಷಿಣ ,ಚಿತ್ರ ದುರ್ಗಾ ಜಿಲ್ಲಾಧ್ಯಕ್ಷ ಯಶೋಧರ - ಹಿರಿಯೂರು, ಊದಿಗೆರೆ ರಮೇಶ್ -ಚೆನ್ನಗಿರಿ, ಶೀಲಾನಯಕ್ -ಮಯಗೊಂಡ,ಶಶಿ ಭೂಷಣ್ ಹೆಗಡೆ - ಶಿರಸಿ, ಜಿ ವಿಜಯ್ - ಮಡಿಕೇರಿ, ಮಹದೇವ್ -ಪಿರಿಯಾಪಟ್ಟಣ, ಅಶೋಕ್ ಬೇವಿನಮರ -ಶಿಂಗ್ಗಾವ್, ಎಂ ಎಸ್ ಅಕ್ಕಿ - ಕುಂದಗೋಳ,ರಾಜಣ್ಣ ಕೊರವಿ - ಹುಬ್ಬಳ್ಳಿ - ಧಾರವಾಡ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ - ಹುಬ್ಬಳಿ- ಧಾರವಾಡ ಪೂರ್ವ, ಅಲ್ತಾಫ್ ಕಿತ್ತೂರು/ ಗುರುರಾಜ್ ಹುಣಸಿಮರ - ಹುಬ್ಬಳ್ಳಿ - ಧಾರವಾಡ ಪಕ್ಷಿಮ, ಶಂಕರ ಮಾರಡಗಿ -ಬೈಲಹೊಂಗಲ, ಎಂ ಸಿ ಮನಗೂಳಿ - ಸಿಂಧಗಿ, ಅಮೀನ್ ರೆಡ್ಡಿ - ಶಹಾಪುರ , ಈ . ಸತೀಶ್ - ಮಹದೇವಪುರ, ವೀರಭದ್ರಯ್ಯ-ಮಧುಗಿರಿ,ಸಿ ಬಿ ಸುರೇಶ್ ಬಾಬು-ಚಿಕ್ಕನಾಯಕನ ಹಳ್ಳಿ, ಎಂ ಕೃಷ್ಣಪ್ಪ ತುರುವೇಕೆರೆ, ಡಿ ನಾಗರಾಜು-ಕುಣಿಗಲ್, ಪಿ. ಆರ್ ಸುಧಾಕರ್ ಲಾಲ್-ಕೊರಟಗೆರೆ, ಎಸ್. ಆರ್ ಶ್ರೀ ನಿವಾಸ್(ವಾಸು)-ಗುಬ್ಬಿ, ತಿಮ್ಮರಾಯಪ್ಪ-ಪಾವಗಡ , ಮಲ್ಲಿಕಾರ್ಜುನ-ಬಸವಕಲ್ಯಾಣ, ಎನ್.ಎಚ್. ಕೋನಾ ರೆಡ್ಡಿ-ನವಲಗುಂದ, ಎಚ್. ಎಸ್. ಶಿವಶಂಕರ್-ಹರಿಹರ,ಶಾರದಾ ಪೂರ್ಯ ನಾಯಕ್- ಶಿವಮೊಗ್ಗ ಗ್ರಾಮಾಂತರ, ಎಂ.ಜೆ. ಅಪ್ಪಾಜಿ-ಭದ್ರಾವತಿ,ಬಿ.ಬಿ ನಿಂಗಯ್ಯ-ಮೂಡಿಗೆರೆ.

 

Edited By

hdk fans

Reported By

hdk fans

Comments

Kumar ಮಳವಳ್ಳಿ ಕ್ಷೇತ್ರದ ಅನ್ನದಾನಿಯವರು ಹೆಸರು