ಧಾರ್ಮಿಕ ಕಾರ್ಯಕ್ರಮಗಳು ಎಲ್ಲರನ್ನೂ ಒಗ್ಗೂಡಿಸುತ್ತವೆ: ಡಾ. ಶ್ರೀ ಹನುಮಂತನಾಥಸ್ವಾಮೀಜಿ

18 Dec 2017 8:09 PM |
519 Report

ಕೊರಟಗೆರೆ :- ಗ್ರಾಮದವರೆಲ್ಲರನ್ನೂ ಒಗ್ಗೂಡಿಸಲು ದೇವಾಲಯ ಮತ್ತು ಧಾರ್ಮಿಕ ಕೈಂಕರ್ಯಗಳು ಸಹಕಾರಿಯಾಗಿವೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥಸ್ವಾಮೀಜಿ ತಿಳಿಸಿದರು. ತಾಲೂಕಿನ ಬೇಡರ ಅಗ್ರಹಾರ ಗ್ರಾಮದಲ್ಲಿ ಗ್ರಾಮದೇವತೆ ಪಿಡತಮ್ಮ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ಪ್ರತೀ ಗ್ರಾಮದಲ್ಲೂ ಗ್ರಾಮದೇವತೆಗಳಿರುತ್ತವೆ ಅವುಗಳನ್ನು ಗ್ರಾಮಗಳ ರಕ್ಷಣೆಗಾಗಿ ನಮ್ಮ ಪೂರ್ವಿಕರು ಪ್ರತಿಷ್ಠಾಪಿಸಿದ್ದಾರೆ ಇವುಗಳನ್ನು ಪೂಜೆ ಪುನಸ್ಕಾರಗಳನ್ನು ಮಾಡುವುದರೊಂದಿಗೆ ಗ್ರಾಮದಲ್ಲಿ ನೆಲೆಸಿರುವಂತಹ ಎಲ್ಲಾ ಸಮುದಾಯದವರೂ ಒಂದಾಗಿ ಬದುಕಬೇಕು ಎನ್ನುವ ಕಲ್ಪನೆಯೊಂದಿಗೆ ಮಾಡಿದ್ದರು ಎಂದರು.
ಆಧುನಿಕ ಬರಾಟೆಯಲ್ಲಿ ಪ್ರತೀ ಗ್ರಾಮದಲ್ಲಿನ ಗ್ರಾಮದೇವತೆಗಳ ದೇವಾಲಯಗಳು ಶಿಥಿಲಗೊಳ್ಳುತ್ತಿವೆ ಆದರೆ ಕೆಲವು ಗ್ರಾಮಗಳಲ್ಲಿ ಇವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಪುನರ್ ಪ್ರತಿಷ್ಠಾಪಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಪ್ರತೀ ಗ್ರಾಮದಲ್ಲೂ ಇವುಗಳನ್ನು ರಕ್ಷಿಸಬೇಕು ಎಂದರು ಹೇಳಿದರು.
ನೂತನ ವಿಗ್ರಹ ಪ್ರತಿಷ್ಠಾಪನ ಮಹೋತ್ಸವ ಅಂಗವಾಗಿ ಹಲವು ಧಾರ್ಮಿಕ ಕೈಂಕರಗಳು ನಡೆದವು, ನೂರಾರು ಸ್ಥಳೀಯ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಕುಂಬಕಳಸದೊಂದಿಗೆ ಪಾಲ್ಗೊಂಡಿದರು.
ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯ ಚಿಕ್ಕನರಸಪ್ಪ, ದೇವಾಲಯ ಸಮಿತಿಯ ದೇವಾರಾಜು, ಚೇತನ ವಿದ್ಯಾಸಂಸ್ಥೆಯ ಅಧ್ಯಕ್ಷ ದೊಡ್ಡರಂಗೇಗೌಡ, ರಂಗರಸಪ್ಪ, ಶ್ರೀನಿವಾಸಮೂರ್ತಿ, ಮಾರುತಿ, ಸೇರಿದಂತೆ ಇತರರು ಇದ್ದರು.

Edited By

Raghavendra D.M

Reported By

Raghavendra D.M

Comments