ನಿತ್ಯದ ಬದುಕು ವ್ರತವಾಗಲಿ : ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ವೀರಭದ್ರಶಿವಾಚಾರ್ಯಸ್ವಾಮೀಜಿ

18 Dec 2017 7:58 PM |
437 Report

ಕೊರಟಗೆರೆ :- ಮಾಲೆಯನ್ನು ಧರಿಸುವ ಅಯ್ಯಪ್ಪಮಾಲಾದಾರಿಗಳು ವ್ರತದಲ್ಲಿ ಅನುಸರಿಸುವ ಕ್ರಮಗಳನ್ನು ನಿತ್ಯದ ಬದುಕಿಗೂ ಅಳವಡಿಸಿಕೊಳ್ಳಬೇಕು ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿವತಿಯಿಂದ 25ನೇ ವರ್ಷದ ಪಡಿಪೂಜೆ ಮತ್ತು ಭಜನಾ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿ ಮಾತನಾಡಿದರು. ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವುದಕ್ಕಾಗಿ ಮಾಲಾಧಾರಿಗಳು 48 ದಿನಗಳ ಕಾಲ ಕಾಮ, ಕ್ರೊದ, ಮದ ,ಮತ್ಸರ್ಯವನ್ನು ತ್ಯಜಿಸಿ ಜಪ-ತಪಗಳ ಆಚರಣೆಮಾಡಿ ತಮ್ಮ ಪಾಪ ಕರ್ಮಗಳಿಂದ ಮುಕ್ತಿ ಪಡೆಯುತ್ತಾರೆ ಎಂದರು.

  • ನಿತ್ಯದ ಬದುಕು ವ್ರತವಾಗಲಿ : ವೀರಭದ್ರಶಿವಾಚಾರ್ಯಸ್ವಾಮೀಜಿ
    ಕೊರಟಗೆರೆ :- ಮಾಲೆಯನ್ನು ಧರಿಸುವ ಅಯ್ಯಪ್ಪಮಾಲಾದಾರಿಗಳು ವ್ರತದಲ್ಲಿ ಅನುಸರಿಸುವ ಕ್ರಮಗಳನ್ನು ನಿತ್ಯದ ಬದುಕಿಗೂ ಅಳವಡಿಸಿಕೊಳ್ಳಬೇಕು ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿವತಿಯಿಂದ 25ನೇ ವರ್ಷದ ಪಡಿಪೂಜೆ ಮತ್ತು ಭಜನಾ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿ ಮಾತನಾಡಿದರು.
    ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವುದಕ್ಕಾಗಿ ಮಾಲಾಧಾರಿಗಳು 48 ದಿನಗಳ ಕಾಲ ಕಾಮ, ಕ್ರೊದ, ಮದ ,ಮತ್ಸರ್ಯವನ್ನು ತ್ಯಜಿಸಿ ಜಪ-ತಪಗಳ ಆಚರಣೆಮಾಡಿ ತಮ್ಮ ಪಾಪ ಕರ್ಮಗಳಿಂದ ಮುಕ್ತಿ ಪಡೆಯುತ್ತಾರೆ ಎಂದರು.
    ನಮ್ಮ ಹಿಂಧೂ ಸಂಪ್ರದಾಯದಲ್ಲಿ ಒಂದು ಹುಲ್ಲಿನ ಕಡ್ಡಿಯಲ್ಲಿಯೂ ಸಹ ದೇವರನ್ನು ಕಾಣಬಹುದಾಗಿದ್ದು ನಂಬಿದರೆ ಒಂದು ಕಲ್ಲು ಕೂಡ ದೇವರಂತೆ ಕಾಣತ್ತದೆ . ನಂಬಿಕೆ ಇಲ್ಲವಾದರೆ ದೇವರು ಕೂಡ ಕಲ್ಲಿನಂತಯೇ ಕಾಣುತ್ತದೆ. ನೀವು ಯಾವುದೇ ದೇವರನ್ನು ಪೂಜೆ ಮಾಡಿದರು. ಮನುಕುಲದ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಕ್ತಿ ಪೂರ್ವಕವಾಗಿ ದೇವರಲ್ಲಿ ಮೊರೆ ಹೋದಾಗ ಮಾತ್ರ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.
    ಶಾಸಕ ಪಿ.ಆರ್ ಸುಧಾಕರ್ಲಾಲ್ ಮಾತನಾಡಿ ಜೀವನದಲ್ಲಿ ಸಂತೋಷದಿಂದ ಬದುಕಬೇಕಾದರೆ ಮಾತೃ-ಪೀತರಿಗೆ ಒಳ್ಳೆಯ ಮಕ್ಕಳಾಗಿ ಊರಿಗೆ ಉತ್ತಮವಾದ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ ವ್ಯಕ್ತಿಯಾಗಬೇಕು. ನಿಮ್ಮ ಈ ಭಕ್ತಿಗೆ ಫಲ ದೊರೆಯಬೇಕಾದರೆ ಗುರು-ಹಿರಿಯರಿಗೆ ಗೌರವಿಸುವಂತಾಗಬೇಕು ಎಂದರು.
    ಕಾರ್ಯಕ್ರಮದಲ್ಲಿ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ಭಜನಾ ಕಾರ್ಯಕ್ರಮದಲ್ಲಿ ಗುರುಸ್ವಾಮಿಗಳಾದ ಶಿವಲಿಂಗಯ್ಯ, ರಾಮಣ್ಣ, ಶಂಕರ್, ಹುಚ್ಚಣ್ಣ, ಗುಂಡಣ್ಣ, ಮಂಜುನಾಥ್, ತಿಮ್ಮರಾಜು, ವೆಂಕಟೇಶ್, ಕಿರಣ್, ಕುಮಾರಸ್ವಾಮಿ, ನರಸಿಂಹರಾಜು, ಸಂತೋಷ್, ಮಲ್ಲಿಕಾಜರ್ುನ್, ನಾಗರಾಜು, ಸಿದ್ದಪ್ಪ ಸೇರಿದಂತೆ ಮಾಲೆಧರಿಸಿದ ಅಯ್ಯಪ್ಪ ಭಕ್ತಾಧಿಗಳು ಇದ್ದರು. (ಚಿತ್ರ ಇದೆ)
     
  • ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿವತಿಯಿಂದ ಹಮ್ಮಿಕೊಂಡಿದ್ದ 25ನೇ ವರ್ಷದ ಪಡಿಪೂಜಾ ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮತ್ತು ಶಾಸಕ ಪಿ.ಆರ್ ಸುಧಾಕರ್ಲಾಲ್ ಸೇರಿದಂತೆ ಇತರರು.
  • REPORTED BY: RAGHAVENDRA D.M

Edited By

Raghavendra D.M

Reported By

Raghavendra D.M

Comments