ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ : ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್

18 Dec 2017 7:41 PM |
380 Report

ಕೊರಟಗೆರೆ ಡಿ.18:- ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ ಎಲ್ಲರೂ ನಮ್ಮ ಭಾಷೆಯ ಪ್ರಾಮುಖ್ಯತೆಯ ಬಗ್ಗೆ ಅರಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಹೇಳಿದರು. ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ಡಾ.ಜಿ ಪರಮೇಶ್ವರ್ ಅಭಿಮಾನಿ ಬಳಗದ ವತಿಯಿಂದ ನಡೆದ 5ನೇ ವರ್ಷದ ವೈಭವದ ಅದ್ದೂರಿ ಕನ್ನಡದ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1950ರಲ್ಲಿ ಪ್ರಾಂತ್ಯಗಳ ರಚನೆ ಮಾಡಿದಾಗ ರಾಜ್ಯವನ್ನು ಮೈಸೂರು ರಾಜ್ಯವನ್ನಾಗಿ ಘೋಷಣೆ ಮಾಡಿಲಾಯಿತು, 1973ರಲ್ಲಿ ದೇವರಾಜು ಅರಸು ಮುಖ್ಯಮಂತ್ರಿಗಳಾಗಿದ್ದಾಗ ಮೈಸೂರು ರಾಜ್ಯವನ್ನು ಕನರ್ಾಟಕ ರಾಜ್ಯ ಎಂದು ಘೋಷಣೆ ಮಾಡಿದರು ಎಂದರು.

ಕೊರಟಗೆರೆ ಡಿ.18:- ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ ಎಲ್ಲರೂ ನಮ್ಮ ಭಾಷೆಯ ಪ್ರಾಮುಖ್ಯತೆಯ ಬಗ್ಗೆ ಅರಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಹೇಳಿದರು.
ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ಡಾ.ಜಿ ಪರಮೇಶ್ವರ್ ಅಭಿಮಾನಿ ಬಳಗದ ವತಿಯಿಂದ ನಡೆದ 5ನೇ ವರ್ಷದ ವೈಭವದ ಅದ್ದೂರಿ ಕನ್ನಡದ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1950ರಲ್ಲಿ ಪ್ರಾಂತ್ಯಗಳ ರಚನೆ ಮಾಡಿದಾಗ ರಾಜ್ಯವನ್ನು ಮೈಸೂರು ರಾಜ್ಯವನ್ನಾಗಿ ಘೋಷಣೆ ಮಾಡಿಲಾಯಿತು, 1973ರಲ್ಲಿ ದೇವರಾಜು ಅರಸು ಮುಖ್ಯಮಂತ್ರಿಗಳಾಗಿದ್ದಾಗ ಮೈಸೂರು ರಾಜ್ಯವನ್ನು ಕನರ್ಾಟಕ ರಾಜ್ಯ ಎಂದು ಘೋಷಣೆ ಮಾಡಿದರು ಎಂದರು.

ಕನ್ನಡ ಮಾತನಾಡುವ ಜನ ಒಂದು ಕಡೆ ಇರಬೇಕು, ಕನ್ನಡ ಭಾಷೆ, ಸಂಸ್ಕೃತಿ, ನಾಗರೀಕತೆ, ಉಡುಪುಗಳು ಉಳಿಬೇಕೆಂಬ ಕಲ್ಪನೆಯಿಂದ ಇಂದು ಕನರ್ಾಟಕ ಕನರ್ಾಟಕವಾಗಿಯೇ ಉಳಿದಿದೆ ಆದರೆ ರಾಜ್ಯ ಬಹಳ ಕಷ್ಟದಲಿದ್ದು ಕನ್ನಡ ಭಾಷೆಯನ್ನು ಮಾತನಾಡುವ ಜನ ಇತ್ತಿಚ್ಚಿಗೆ ಕ್ಷಿಣಿಸುತ್ತಿದ್ದು ಅದರಲ್ಲೂ ನಗರ ಪ್ರದೇಶಗಳಲ್ಲಿ ಕನ್ನಡಭಾಷೆ ಮರೆಯಾಗುತ್ತಿದ್ದು ಹೊರ ರಾಜ್ಯದಿಂದ ಬಂದಂತಹ ಜನರೊಂದಿಗೆ ನಾವು ಅವರ ಭಾಷೆಯಲ್ಲಿಯೇ ಸಂಭಾಷಣೆ ಮಾಡುವುದರ ಬಗ್ಗೆ ವಿಷಾದಿಸಿದರು.
ಮಾಜಿ ಸಚಿವ ಸಿ.ವೀರಣ್ಣ ಮಾತನಾಡಿ ಗ್ರಾಮೀಣ ಪ್ರದೇಶದ ಯುವಕರು ಕನ್ನಡ ರಾಜ್ಯೋತ್ಸವಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕನ್ನಡ ಭಾಷೆಯ ಉಳಿವಿಗಾಗಿ ಸದಾಕಾಲ ಹೋರಾಡಬೇಕು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಕನ್ನಡದ ಭಾಷೆಯ ಇತಿಹಾಸವನ್ನು ತಿಳಿಸುವುದರ ಮೂಲಕ ಮಕ್ಕಳಿಗೆ ಕನ್ನಡ ಭಾಷೆಯನ್ನು ಗೌರವಿಸುವಂತಹ ಮನಸ್ಥಿತಿ ಹೊಂದಿ ಕನ್ನಡದಲ್ಲಿಯೇ ವ್ಯಾಸಂಗ ಮಾಡಿ ಕನ್ನಡ ಭಾಷೆಯನ್ನು ಇತರೆ ಭಾಷೆಗಳಿಗಿಂತ ಕಡಿಮೆ ಇಲ್ಲ ಎಂದು ತೋರಿಸಿಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತೆಂಗುನಾರು ಅಧ್ಯಕ್ಷ ಜಿ.ವೆಂಕಟಚಲಯ್ಯ, ಕೆಪಿಸಿಸಿ ಸದಸ್ಯ ಪಿ.ಎನ್ ಕೃಷ್ಣಮೂತರ್ಿ,ಸತ್ಯನಾರಾಯಣ್ಗುಪ್ತ, ನಾಟಕ ಅಕಡಮಿ ಸದಸ್ಯ ಮೈಲಾರಪ್ಪ, ಅಶ್ವತ್ಥನಾರಾಯಣ್ ಗ್ರಾ.ಪಂ ವೀರಭದ್ರಶಯ್ಯ, ಡಿಸಿಸಿ ಬ್ಯಾಂಕ್ ನಿದರ್ೇಶಕ ಹನುಮಾನ್, ಅಲ್ಲಾಭಕಾಷ್, ನಾಸೀರ್, ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)
18ಕೊರಟಗೆರೆ ಚಿತ್ರ1:- ಹೊಳವನಹಳ್ಳಿ ಗ್ರಾಮದಲ್ಲಿ ಡಾ.ಜಿ ಪರಮೇಶ್ವರ್ ಅಭಿಮಾನಿ ಬಳಗದ ವತಿಯಿಂದ ನಡೆದ 5ನೇ ವರ್ಷದ ವೈಭವದ ಅದ್ದೂರಿ ಕನ್ನಡದ ಹಬ್ಬ ಕಾರ್ಯಕ್ರಮವನ್ನ ಉದ್ಘಾಟಿಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಸೇರಿದಂತೆ ಇತರರು ಇದ್ದರು.

Edited By

Raghavendra D.M

Reported By

Raghavendra D.M

Comments