ಜೆಡಿಎಸ್ ತೊರೆಯುವ ಶಾಸಕರ ಬಗ್ಗೆ ದೇವೇಗೌಡರ ಪ್ರತಿಕ್ರಿಯೆ

18 Dec 2017 6:04 PM |
520 Report

ಜನರಿಂದ ಉಳಿದುಕೊಂಡು ಬಂದಿರುವ ಜೆಡಿಎಸ್‍ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾರ್ಥಕ್ಕಾಗಿ ಪಕ್ಷ ತೊರೆಯುವವರಿಂದ ಜೆಡಿಎಸ್ ಉಳಿದು, ಬೆಳೆದುಕೊಂಡು ಬಂದಿಲ್ಲ.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಆದಿಯಾಗಿ ರಾಜ್ಯದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೆಗೆ ಬಹಳಷ್ಟು ನಾಯಕರು ಜೆಡಿಎಸ್ ತೊರೆದಿದ್ದಾರೆ. ಆದರೂ ಪ್ರಾದೇಶಿಕ ಪಕ್ಷವನ್ನು ಜನರು ರಾಜ್ಯದಲ್ಲಿ ಉಳಿಸಿದ್ದಾರೆ ಎಂದರು.ಗುಜರಾತ್ ಚುನಾವಣಾ ಫಲಿತಾಂಶದ ನಂತರ ಬಹಳಷ್ಟು ಮಂದಿ ಜೆಡಿಎಸ್ ತೊರೆಯಲಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷಾಂತರಗೊಳ್ಳುವ ಮುಖಂಡರಿಂದ ಪಕ್ಷ ಉಳಿದಿಲ್ಲ. ನಾಡಿನ ಜನರು ಜೆಡಿಎಸ್‍ನನ್ನು ಉಳಿಸಿದ್ದಾರೆ.

ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತಿರುವ ಜನತೆ ಪ್ರಾದೇಶಿಕ ಪಕ್ಷದತ್ತ ಒಲವು ತೋರಿದ್ದಾರೆ. ತಮಿಳುನಾಡಿನಲ್ಲಿರುವಂತೆ ಪ್ರಾದೇಶಿಕ ಪಕ್ಷ ರಾಜ್ಯದಲ್ಲೂ ಪ್ರಾಬಲ್ಯಕ್ಕೆ ಬರಲಿದೆ ಎಂದು ಗೌಡರು ವಿಶ್ವಾಸ ವ್ಯಕ್ತಪಡಿಸಿದರು. ಈಗಾಗಲೇ ಹಲವು ಮಂದಿ ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ. ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.ಪಕ್ಷ ಸಂಘಟನೆ ಮಾಡುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ತರಬೇಕೆಂಬುದೇ ನಮ್ಮ ಮುಂದಿರುವ ಗುರಿ ಎಂದು ಅವರು ಹೇಳಿದರು.

Edited By

Shruthi G

Reported By

hdk fans

Comments