ಸಂಕಣ್ಣನವರ ಸೇವಾ ಟ್ರಸ್ಟ್ ವತಿಯಿಂದ ನಗರಸಭಾಧ್ಯಕ್ಷರಿಗೆ ಅಭಿನಂದನೆ
ದೊಡ್ಡಬಳ್ಳಾಪುರ ನಗರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ತ.ನ.ಪ್ರಭುದೇವ್ ರವರನ್ನು ನಗರದ ಸಂಕಣ್ಣನವರ ಸೇವಾ ಟ್ರಸ್ಟ್ ವತಿಯಿಂದ ಇಂದು ಸನ್ಮಾನಿಸಲಾಯಿತು. ಇದೇ ಸಂದರ್ಬದಲ್ಲಿ ನಗರದ ಮಹಿಳಾ ಸಮಾಜಕ್ಕೆ ನಿರ್ದೇಶಕಿಯರಾಗಿ ಆಯ್ಕೆಯಾದ ಸಂಕಣ್ಣನವರ ಶ್ರೀಮತಿ ಕವಿತಾ ರವಿಕುಮಾರ್, ಮತ್ತು ಯಶೋಧಮ್ಮ ರವರನ್ನು ಅಭಿನಂದಿಸಲಾಯಿತು.
ಟ್ರಸ್ಟ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯವರು ಹಾಜರಿದ್ದ ಈ ಸರಳ ಸಮಾರಂಭದಲ್ಲಿ ಟ್ರಸ್ಟ್ ನಿರ್ದೇಶಕರಾದ ಶಂಕರ್ ವಿಜೇಂದ್ರಪ್ರಸಾದ್, ಕಾಂತ, ಕಾರ್ಯದರ್ಶಿ ನಾಗರಾಜ್, ಸದಾಶಿವಪ್ಪ ಮತ್ತಿತರು ಇದ್ದರು.
Comments