ಗುಜರಾತ್ ಹಾಗೂ ಹಿಮಾಚಲಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಬೇರಿ, ದೊಡ್ಡಬಳ್ಳಾಪುರದಲ್ಲಿ ಸಂಭ್ರಮಾಚರಣೆ
ಗುಜರಾತ್ ಹಾಗೂ ಹಿಮಾಚಲಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಬೇರಿ ಬಾರಿಸಿ ಮುಂದಿನ ಕರ್ನಾಟಕದ ಚುನಾವಣೆಗೆ ನಾಂದಿ ಹಾಡಿ ಮಿಷನ್ 150 ಗೆ ಪುಷ್ಠಿ ನೀಡಿದ ದೇಶದ ಪ್ರಧಾನಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ದೊಡ್ಡಬಳ್ಳಾಪುರ ನಗರ ಘಟಕದವತಿಯಿಂದ ಸಲ್ಲಿಸಲಾಯಿತು. ಗುಜರಾತ್, ಹಿಮಾಚಲ ಪ್ರದೇಶದ ಚುನಾವಣಾ ಗೆಲುವನ್ನ ದೊಡ್ಡಬಳ್ಳಾಪುರದ ಹಳೆ ಬಸ್ ನಿಲ್ಣಾಣದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಂಬ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷರಾದ ಕೆ.ಎಂ.ಹನುಮಂತರಾಯಪ್ಪ, ನಗರ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ, ಬೆಂ.ಗ್ರಾ.ಜಿಲ್ಲಾಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲ, ಲೀಲಾಮಹೇಶ್, ಮೋಹನ್ ಕುಮಾರ್, ಶ್ರೀನಿವಾಸ್, ಶಿವಶಂಕರ್, ಉಮಾಮಹೇಶ್ವರಿ, ಪುಷ್ಪಾಶಿವಶಂಕರ್, ಗಿರಿಜ, ಕಂಬಿ ನಂಜಪ್ಪ, ರಂಗಣ್ಣ, ರಾಂದಾಸ್, ಮತ್ತಿತರರು ಹಾಜರಿದ್ದರು.
Comments