ಸುದೀಪ್ ಆಪ್ತನಿಗೆ ಜೆಡಿಎಸ್ ನಿಂದ ಟಿಕೆಟ್

18 Dec 2017 11:07 AM |
14032 Report

ಸುದೀಪ್ ಅವರ ಆಪ್ತ ಸ್ನೇಹಿತ ಹಾಗೂ ಮ್ಯಾನೇಜರ್ ಆಗಿರೋ 'ಜಾಕ್ ಮಂಜು' ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಚಿಕ್ಕಪೇಟೆ ಕ್ಷೇತ್ರದಿಂದ ನಿರ್ಮಾಪಕ ಜಾಕ್ ಮಂಜು ಅವರಿಗೆ ಜೆಡಿಎಸ್ ನಿಂದ ಕುಮಾರಸ್ವಾಮಿ ಟಿಕೆಟ್ ನೀಡಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದ ಗಲ್ಲಿಯಲ್ಲಿ ಸದ್ದು ಮಾಡುತ್ತಿದೆ.

ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿರುವ ಸುದೀಪ್ ಆಪ್ತರಿಗಾಗಿ ಪ್ರಚಾರ ಮಾಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಕಳೆದ ಬಾರಿ 'ಅಂಬರೀಶ್' ಅವರ ಪರ ಪ್ರಚಾರವನ್ನೂ ಮಾಡಿರುವ ಕಿಚ್ಚ, ಈ ಸಲ ಜಾಕ್ ಮಂಜು ರಾಜಕೀಯ ಪ್ರವೇಶ ಮಾಡಿದರೇ ಜೆಡಿಎಸ್ ಪರ ಕ್ಯಾಂಪೇನ್ ಮಾಡೋದು ಖಚಿತ.

 

Edited By

Shruthi G

Reported By

hdk fans

Comments