ಯಶಸ್ವಿಯಾಗಿ ಮುಗಿದ ೨೨ನೇ ವರ್ಷದ ಘಾಟಿ ನಡಿಗೆ ಆರೋಗ್ಯದೆಡೆಗೆ ಪಾದಯಾತ್ರೆ ಕಾರ್ಯಕ್ರಮ
ದೊಡ್ಡಬಳ್ಳಾಪುರದಿಂದ ಘಾಟಿಕ್ಷೇತ್ರಕ್ಕೆ ಡಿಸೆಂಬರ್ 17 ರ ಭಾನುವಾರ ಬೆಳಿಗ್ಗೆ ನಾಗದಳ ಮತ್ತು ಶ್ರೀ ಮಾರುತಿ ವ್ಯಾಯಾಮಶಾಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆ ಕಾರ್ಯಕ್ರಮ ಕೊಂಗಾಡಿಯಪ್ಪ ಮುಖ್ಯರಸ್ತೆಯ ನೇಯ್ಗೆಯವರ ಬೀದಿ ಪಾಠಶಾಲೆ ಬಳಿಯಿಂದ ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಪಾದಯಾತ್ರೆ ಪ್ರಾರಂಭವಾಯಿತು. ಮಾರುತಿ ವ್ಯಾಯಾಮ ಶಾಲೆ, ನಾಗದಳ ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಸ್ವಾಮಿಯವರ ದರ್ಶನ ಪಡೆಯುವುದರೊಂದಿಗೆ ಯಶಸ್ವಿಯಾಗಿ ೨೨ನೇ ವರ್ಷದ ಘಾಟಿ ನಡಿಗೆ ಆರೋಗ್ಯದೆಡೆಗೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.
Comments