ಕರ್ನಾಟಕದಲ್ಲೇ ಮೊದಲ ಬಾರಿಗೆ ಸ್ಥಳೀಯ ವಾರ್ತೆಗಳಿಗಾಗಿ ನಿರ್ಮಿಸಿರುವ ದೊಡ್ಡಬಳ್ಳಾಪುರ ವಾರ್ತೆ... ಆಂಡ್ರಾಯ್ಡ್ ಅಪ್ಲಿಕೇಷನ್ ಬಿಡುಗಡೆ




ಕರ್ನಾಟಕದಲ್ಲೇ ಮೊದಲ ಬಾರಿಗೆ ಸ್ಥಳೀಯ ವಾರ್ತೆಗಳಿಗಾಗಿ ನಿರ್ಮಿಸಿರುವ ಅಪ್ಲಿಕೇಷನ್ ಅನ್ನು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು. ಸಿವಿಕ್ ನ್ಯೂಸ್ ಸಿ.ಇ.ಒ. ಡಾ|| ನಾರಾಯಣ್ ಅಪ್ಲಿಕೇಷನ್ ಬಿಡುಗಡೆಗೊಳಿಸಿ ಮಾತನಾಡುತ್ತಾ ಸ್ಥಳೀಯವಾಗಿ ಕ್ಷಣಕ್ಷಣದ ಮಾಹಿತಿ ನೀಡಲು ನಿರ್ಮಿಸಿರುವ ಆಂಡ್ರಾಯ್ಡ್ ಅಪ್ಲಿಕೇಷನ್, ಇರುವಲ್ಲೇ ತಿಳಿಯುವಂತೆ ಮಾಡಿರುವ ಪ್ರಯೋಗ, ಇಡೀ ಭಾರತದಲ್ಲೇ ಮೊದಲ ಬಾರಿಗೆ ನಮ್ಮ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಬಿಡುಗಡೆಗೊಳಿಸುತ್ತಿರುವುದು ಹೆಮ್ಮೆಯಾಗುತ್ತದೆ ಎಂದು ಹೇಳಿದರು. ನಗರದ ಪತ್ರಿಕಾ ವರದಿಗಾರರಾದ ರವಿಕಿರಣ್, ನಟರಾಜ್ ನಾಗಸಂದ್ರ, ಶ್ರೀಕಾಂತ್, ರಾಜಶೇಖರ ಶೆಟ್ಟಿ, ನಾಗರಾಜ್, ರಾಮಚಂದ್ರ, ಚಂದ್ರು ಮತ್ತು ದೊಡ್ಡಬಳ್ಳಾಪುರ ವಾರ್ತೆಯ ಸ್ಥಳೀಯ ಸಂಪಾದಕ ರಮೇಶ್ ಹಾಜರಿದ್ದರು.
Comments