ಕುಮಾರಣ್ಣನ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ ಒಳ್ಳೆ ಹುಡುಗ ಪ್ರಥಮ್

ದೇವೇಗೌಡರ ಮೊಮ್ಮಗ ,ಕುಮಾರಸ್ವಾಮಿಯವರು ದೊಡ್ಡಪ್ಪ , ಎಂದು ಹೇಳಿಕೊಂಡು ಬಿಗ್ಬಾಸ್ ಮನೆ ಪ್ರವೇಶಿಸಿ ಎಲ್ಲರ ತಲೆಗೆ ಹುಳಬಿಟ್ಟಿದ್ದ ಪ್ರಥಮ್ ,ರಾತ್ರಿ 12 ಗಂಟೆಗೆ ಕುಮಾರಣ್ಣ ಇರುವ ಜಾಗ ಹುಡುಕಿಕೊಂಡು ಬಂದು ಪ್ರೀತಿ ಯಿಂದ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.
ಶಾಸಕರುಗಳು ಸಭೆ ಮುಗಿದು ಬರುವ ಕುಮಾರಸ್ವಾಮಿಯವರ ದರ್ಶನ ಮಾಡಲು ಅಭಿಮಾನಿಗಳು ಕಾಯುತ್ತಿದ್ದಾಗ ಗುಂಪಿನಲ್ಲಿ ಸರ ಸರನೆ ಬಂದ ಪ್ರಥಮ್, ತಮ್ಮ ಅಭಿಮಾನಿಗಳಿಗೆ ಪ್ರೀತಿಯಿಂದಲೇ ,ನಗು ನಗುತ್ತಲೇ ಮಾತನಾಡಿಸುತ್ತಾ ,ಸೆಲ್ಫಿ ಗಳಿಗೆ ಸಹಕರಿಸುತ್ತ ಒಳಕ್ಕೆ ಹೋಗಲು ಮುನ್ನಡೆದರು. ಅಲ್ಲೇ ಇದ್ದ ಜೆಡಿಎಸ್ ಐ. ಟಿ ವಿಂಗ್ ಸದಸ್ಯರ ಸಹಾಯದಿಂದ ಸಭೆ ನಡೆಯುತ್ತಿದ್ದ ಜಾಗಕ್ಕೆ ಒಳ ಹೋದ ಪ್ರಥಮ್ ಪ್ರೀತಿಯಿಂದ ತಾವು ತಂದಿದ್ದ ಹೂವಿನ ಗುಚ್ಛ ನೀಡಿ ನೆಚ್ಚಿನ ನಾಯಕನಿಗೆ ಶುಭ ಹಾರೈಸಿದರು.
Comments