ವಿದ್ಯುನ್ಮಾನ ಮತ ಯಂತ್ರದ (ಇವಿಎಂ) ಬಗ್ಗೆ ಎಚ್ ಡಿಕೆ ಹೇಳಿದ್ದೇನು?

16 Dec 2017 10:05 AM |
459 Report

ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರದ (ಇವಿಎಂ) ಬದಲಿಗೆ ಮತ ಪತ್ರ ಬಳಸಬೇಕು ಎಂಬ ಕಾಂಗ್ರೆಸ್‌ ಒತ್ತಾಯಕ್ಕೆ ಜೆಡಿಎಸ್‌ ಧ್ವನಿಗೂಡಿಸಿದೆ.

ಪಕ್ಷದ ಪ್ರಮುಖರ ಸಭೆಯ ಬಳಿಕ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸುದ್ದಿಗಾರರ ಜತೆ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಎರಡು ವರ್ಷಗಳಿಂದ ಮತ ಪತ್ರವನ್ನು ಬಳಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ ಎಂದರು.ಅಮೆರಿಕಾದಂತಹ ಮುಂದುವರಿದ ದೇಶಗಳಲ್ಲೇ ಮತ ಪತ್ರವನ್ನು ಬಳಸುತ್ತಿದ್ದಾರೆ. ಇವಿಎಂ ಬಗ್ಗೆ ಬಹಳಷ್ಟು ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ. ಪಾರದರ್ಶಕವಾಗಿ ಚುನಾವಣೆ ನಡೆಸಲು ಹಳೆಯ ಚುನಾವಣಾ ಪದ್ಧತಿಯನ್ನೇ ಆರಂಭಿಸಬೇಕು ಎಂದು ಅವರು ಹೇಳಿದರು.

 

Edited By

Shruthi G

Reported By

hdk fans

Comments