ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಚ್ ಡಿಕೆ ಕೈಗೊಳುವ ಮೊದಲ ಕೆಲಸ ಏನು ಗೊತ್ತಾ?
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ 'ಜೆಡಿಎಸ್ ಅಧಿಕಾರಕ್ಕೆ ಬಂದರೆ ನಂತರದ 24 ಗಂಟೆಯಲ್ಲೇ ರೈತರ 50 ಸಾವಿರ ಕೋಟಿ ಸಾಲ ಮನ್ನಾ ಮಾಡುವುದು ಶತಸಿದ್ಧ.
ಸುಳ್ಳು ಹೇಳುತ್ತಿಲ್ಲ, ಭರವಸೆ ನೀಡುತ್ತಿಲ್ಲ, ಮಾಡಿ ತೋರಿಸುತ್ತೇನೆ. ಮನಸ್ಸಿದ್ದರೆ ಮಾರ್ಗವಿದೆ. ರೈತರಿಗಾಗಿ ಆ ಮಾರ್ಗ ಅನುಸರಿಸುವೆ. ನಾನು ಟೈಂ ಮೆಂಟೇನ್ ಮಾಡುವುದಿಲ್ಲ ಎಂಬ ಆರೋಪ ಇದೆ. ಒಪ್ಪುತ್ತೇನೆ, ಆದರೆ ಯಾರನ್ನೂ ನೋಯಿಸಲು ನನ್ನಿಂದಾಗದು. ಹಾಗಾಗಿ ನನ್ನ ಟೈಂ ಸೆನ್ಸ್ ಬಗ್ಗೆ ಅಪವಾದವಿದೆ. ಕರ್ನಾಟಕದ ಬಗ್ಗೆ ನಾನೊಂದು ಕನಸು ಕಂಡಿದ್ದೇನೆ. ಅತಂತ್ರ ವಿಧಾನಸಭೆಯಾದರೆ ನನ್ನ ಕನಸಿನ ಕರ್ನಾಟಕ ನಿರ್ಮಾಣ ಸಾಧ್ಯವಿಲ್ಲ. ಮತ್ತೊಬ್ಬರ ಬಳಿ ಗೋಗರೆಯುವ ಅವಕಾಶ ಕೊಡಬೇಡಿ. 113 ಮ್ಯಾಜಿಕ್ ನಂಬರ್ ಕೊಡಿ, ದೇಶವೇ ತಿರುಗಿ ನೋಡುವಂತೆ ಮಾಡುತ್ತೇನೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವಿ ಹೇಳಿದರು.
Comments