ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಇಂಧನ ಸಚಿವ ಡಿಕೆ ಶಿವಕುಮಾರ್

15 Dec 2017 2:51 PM |
2068 Report

ಬಿಜೆಪಿ ಅಂದ್ರೆ ಸುಳ್ಳಿನ ಕಂತೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ನಾಲ್ಕುವರೆ ವರ್ಷ ಸುಮ್ಮನಿದ್ದ ಬಿಜೆಪಿ ಮುಖಂಡರು ಇದೀಗ ಹೋರಾಟ ಶುರು ಮಾಡಿದ್ಯಾಕೆ ? ಅಮಿತ್ ಶಾ ಆದೇಶ ಪ್ರಕಾರ ಮಾಡ್ತಿರೋದಾಗಿ ಸಂಸದ ಪ್ರತಾಪ್ ಸಿಂಹ ಖುದ್ದು ಹೇಳಿದ್ದಾರೆ.

ಅಧಿಕೃತ ಪ್ರತಿಪಕ್ಷ ಮುಖಂಡ ಈಶ್ವರಪ್ಪ ಸುಳ್ಳನ್ನ ಪದೇ ಪದೇ ಹೇಳಿ ಅಂತಾ ಕಾರ್ಯಕರ್ತರಿಗೆ ಪಾಠ ಮಾಡಿದ್ದಾರೆ. ಇದೀಗ ಜೈಲ್ ಭರೋ ಅನ್ನೋ ಹೊಸ ನಾಟಕ ಶುರು ಮಾಡಲು ಹೊರಟಿದ್ದಾರೆ. ಇದು ಬಿಜೆಪಿ ಸಂಸ್ಕೃತಿ ತೋರಿಸುತ್ತೆ ಎಂದಿದ್ದಾರೆ. ಅದೇ ವೇಳೆ ಹೈಕಮಾಂಡ್ ನಿರ್ದೇಶನದ ಮೇರೆಗೆ ಎರಡು ಯಾತ್ರೆ ಮಾಡ್ತಿದ್ದೇವೆ. ಯಾವುದೇ ಗೊಂದಲ ಇಲ್ಲ ಎಂದಿದ್ದಾರೆ ಡಿಕೆಶಿ.

Edited By

dks fans

Reported By

dks fans

Comments