ಹೈಡ್ರಾಮಕ್ಕೆ ಸಾಕ್ಷಿಯಾದ ಹೈಟೆಕ್ ಬಸ್ ನಿಲ್ದಾಣ ಭೂಮಿಪೂಜೆ, ನಗರಸಭೆ ಸದಸ್ಯರಿಂದ ಪ್ರತಿಭಟನೆ.
ದೊಡ್ಡಬಳ್ಳಾಪುರ ನಗದರದ ಹಳೇ ಬಸ್ ನಿಲ್ದಾಣದಲ್ಲಿ ಶಾಸಕ ಟಿ ವೆಂಕಟರಮಣಯ್ಯ ಹೈಟೆಕ್ ಬಸ್ ನಿಲ್ದಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾದ ಹೈಟೆಕ್ ಬಸ್ ನಿಲ್ದಾಣ ಸಾಕಾರಗೊಳ್ಳುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು, ಈಗ ಭೂಮಿಪೂಜೆ ನೆರವೇರಿಸಿದ್ದೇನೆ, ೫.೫೦ ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದ್ದು ೧೫ ತಿಂಗಳಲ್ಲಿ ಸಿದ್ದವಾಗಲಿದೆ ಎಂದು ಹೇಳಿದರು.
ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಶಾಸಕರು ಬಿಜೆಪಿ, ಜೆಡಿಎಸ್ ನಗರಸಭೆ ಸದಸ್ಯರ ಕಾದಾಟಕ್ಕೆ ಭೂಮಿಪೂಜೆ ಸಾಕ್ಷಿಯಾಯಿತು. ನಗರ ವ್ಯಾಪ್ತಿಯ ಕಾರ್ಯಕ್ರಮವಾದ ಕಾರಣ ಎಲ್ಲಾ ಪಕ್ಷದ ಸದಸ್ಯರೂ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ವೇದಿಕೆಯಲ್ಲಿ ಕೆಲವೇ ಕುರ್ಚಿ ಹಾಕಿದ್ದರಿಂದ ಶಾಸಕರ ಬೆಂಬಲಿಗರು, ಕಾಂಗ್ರೆಸ್ ಮುಖಂಡರು ಕುರ್ಚಿ ಆಕ್ರಮಿಸಿಕೊಂಡಿದ್ದಾರೆ ಎಂದು ಬಿಜೆಪಿ ಸದಸ್ಯ ಡಿ.ಎಂ.ಚಂದ್ರಶೇಖರ್, ವೆಂಕಟರಾಜು ಮತ್ತಿತರರು ಆರೋಪಿಸಿದರು. ನಗರಸಭಾ ಸದಸ್ಯರಿಗೆ ಸೂಕ್ತ ಗೌರವ ಸಿಗುತ್ತಿಲ್ಲ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತೀಕಾರ್ಯಕ್ರಮದಲ್ಲೂ ಕಿರಿಕ್ ಮಾಡುವುದಕ್ಕೆ ಬರ್ತೀರಾ, ಕುರ್ಚಿಗೋಸ್ಕರತಾನೆ ಜಗಳ ಎಂದರು, ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್ ಮತ್ತಿತರರು ಮುಖಂಡರನ್ನು ಸಮಾಧಾನಗೊಳಿಸಿದರು.
Comments