ಲಯನ್ಸ್ ಕ್ಲಬ್ ನಿಂದ ಶಾಲಾಮಕ್ಕಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಣೆ.
ಕೋಳೂರಿನಲ್ಲಿ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಶತಮಾನೋತ್ಸವ ಆಚರಣೆ ಪ್ರಯುಕ್ತ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್, ಲಯನ್ಸ್ ಚಾರಿಟೀಸ್, ಸ್ಮೈಲ್ ಇಂಡಿಯಾ ಡೆಂಟಲ್ ಕ್ಲೀನಿಕ್, ಎಂ.ಪಿ.ಸಿ.ಎಸ್. ಸಹಯೋಗದಲ್ಲಿ ರಾಸುಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಸಿ ನೆಡುವ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ದಂತ ಚಿಕಿತ್ಸೆ ಹಾಗೂ ಉಚಿತ ನೋಟ್ ಪುಸ್ತಕ ವಿತರಣೆ ನಡೆಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಕೆ. ಸೋಮಶೇಕರ್ ಮಾತನಾಡಿ ಸಂಸ್ಥೆಯು ಸಾಮಾಜಿಕವಾಗಿ ಹಿಂದುಳಿದವರಿಗೆ ವೈದ್ಯಕೀಯ, ಶೈಕ್ಷಣಿಕ ಸಹಕಾರ ನೀಡುತ್ತಿದ್ದು, ಪರಿಸರ ಕಾಳಜಿಯೊಂದಿಗೆ ಸಸಿ ನೆಡುವ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಲಯನ್ಸ್ ಜಿಲ್ಲಾ ರಾಜ್ಯಪಾಲ ಎಚ್.ಕೆ.ಗಿರಿಧರ್, ಲಯನ್ಸ್ ಕ್ಲಬ್ ಮೊದಲ ಮಹಿಳೆ ಡಾ. ಮಮತ ಗಿರಿಧರ್, ಪದಾಧಿಕಾರಿಗಳಾದ ಸತ್ಯನಾರಾಯಣರಾಜು, ನಾರಾಯಣಸ್ವಾಮಿ, ದೇವರಾಜು, ನರಸಿಂಹಮೂರ್ತಿ, ಜೆಡಿಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪಧ್ಮನಾಬ್ ಇದ್ದರು.
Comments