ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ಪ್ರತಿಭಟನೆ

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಐಎಸ ಐಎಸ್ ಸಂಘಟನೆಗಳನ್ನು ಮೀರಿಸುವ ರೀತಿಯಲ್ಲಿ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳಾಗುತ್ತಿವೆ, ರಾಜ್ಯ ಮತ್ತೊಂದು ಪಾಕೀಸ್ತಾನವಾಗುತ್ತಿದೆ, ಪರೇಶ್ ಮೇಸ್ತಾ ಸಾವಿಗೆ ಆತ್ಮಹತ್ಯೆ ಎಂದು ಬಣ್ಣ ಬಳಿಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದ್ದು ಖಂಡನೀಯ, ಹತ್ಯ್ಗೆ ಕಾರಣರಾದವರನ್ನು ಕೋಡಲೇ ಬಂಧಿಸಬೇಕು ಎಂದು ಜಿಲ್ಲಾ ಸಂಚಾಲಕರಾದ ನರೇಶ್ ಹೇಳಿದರು. ನಿಷ್ಠಾವಂತ ಅಧಿಕಾರಿಗಳ ಸಾವನ್ನೂ ಆತ್ಮಹತ್ಯೆ ಎಂದು ಹೇಳುವ ಕಾಂಗ್ರೆಸ್ ನಾಯಕರಿಗೆ ಪರೇಶ್ ನೇಸ್ತಾ ಸಾವೂ ಆತ್ಮಹತ್ಯೆಯಾಗಿ ಕಾಣುತ್ತಿದೆ ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತ ರಾಜುವಡ್ಡಹಳ್ಳಿ ಹೇಳಿದರು. ತಾಲ್ಲೂಕು ಸಂಚಾಲಕ ವಿಜಯಾರಾಧ್ಯ, ಪ್ರವೀಣ್, ವೆಂಕಟೇಶ್, ಮಧು, ಮಹೇಶ, ಕೆಂಪೇಗೌಡ ಮತ್ತಿತರರು ಹಾಜರಿದ್ದರು.
Comments