ನನ್ನ_ಕನಸಿನ_ದೊಡ್ಡಬಳ್ಳಾಪುರ, ನಮ್ಮೂರ ರಸ್ತೆಗಳು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು ಹೆಸರಿಗೆ ತಕ್ಕಂತೆ ದೊಡ್ಡೂರೇ ಆದರೆ ಇಲ್ಲಿನ ರಸ್ತೆಗಳ ಸ್ಥಿತಿ ನೋಡುತ್ತಿದ್ದರೆ ಒಮ್ಮೆಲೆ ಮುಜುಗರವಾಗಿ ಬಿಡುತ್ತದೆ. ದೊಡ್ಡಬಳ್ಳಾಪುರ ನಗರದ ಪ್ರಮುಖ ಮುಖ್ಯ ರಸ್ತೆಯಾಗಿರುವ ರಂಗಪ್ಪ ಸರ್ಕಲ್ ರಸ್ತೆಯ ಮೂಲಕವೇ ದಿನನಿತ್ಯ ಬೆಂಗಳೂರಿಗೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸವಾರರು ಧೂಳಿನಿಂದ ತಪಿಸಿಕೊಳ್ಳುವುದು ಒಂದು ಕೆಲಸವಾದರೆ ವಾಹನಗಳನ್ನು ಹಳ್ಳ ಗುಂಡಿಗಳಿಂದ ರಕ್ಷಿಸುವುದು ಇನ್ನೊಂದು ಕೆಲಸ. ಒಟ್ಟಿನಲ್ಲಿ ಈ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಮಾತ್ರ ಚಿಂತಾಜನಕ.
Comments