ಛಾಯಾಗ್ರಹಣ ಕ್ಷೇತ್ರವನ್ನು ನಮ್ಮ ಸರ್ಕಾರಗಳು, ರಾಜಕಾರಿಣಿಗಳು ನಿರ್ಲಕ್ಷಿಸುತ್ತಿರುವುದು ನಿಜಕ್ಕೂ ವಿಷಾದನೀಯ ವಿಚಾರ, ಕೆ.ಪಿ.ಎ. ಉಪಾಧ್ಯಕ್ಷ ಹೆಚ್.ಎಸ್. ನಾಗೇಶ್

14 Dec 2017 7:22 AM |
412 Report

ಛಾಯಾಗ್ರಹಣ ಕ್ಷೇತ್ರ ಇಂದು ಅಪಾರವಾಗಿ ಬೆಳೆದು ಈ ಮಾನವ ಸಮಾಜದಲ್ಲಿ ತನ್ನದೇ ಆದ ರೀತಿ ಮನುಷ್ಯರಿಗೆ ಜೊತೆಯಾಗಿದೆ, ಇವತ್ತು ಮಾನವನ ಯಾವುದೇ ವಿಚಾರದಲ್ಲಿ ಛಾಯಾಗ್ರಹಣ ಇಲ್ಲ ಅನ್ನುವ ಹಾಗಿಲ್ಲ, ಉದಾಹರಣೆಗೆ ಆಕಾಶದ ವೈವಿದ್ಯಮಯ ವಿಚಾರಗಳಿಂದ ಹಿಡಿದು ಗ್ರಹಮಂಡಲಾದಿಗಳ ವಿಚಾರಗಳನ್ನು ತಿಳಿಯಪಡಿಸುವುದೇ ನಮ್ಮ ಕ್ಯಾಮರಾಜಗತ್ತು, ಸಾಗರದ ಒಡಲಾಳದಂದ ಭೂಗರ್ಭದ ವಿಚಾರಗಳಿಂದ, ಮಾನವನ ನರನಾಡಿಗೆ ಒಳಹೊಕ್ಕು ಅವನ ಖಾಯಿಲೆ ಪತ್ತೆಹಚ್ಚುವ ಕಾಯಕವನ್ನೂ ಮಾಡುತ್ತೆ ಈ ಕ್ಯಾಮರಾಜಗತ್ತು, ಇಂದಿನ ಸಮಾಜವನ್ನು ಪೋಲೀಸ್, ಸೈನಿಕರು ಕಾಯುವ ಹಾಗೇ ಈ ಸಮಾಜವನ್ನು ಕ್ಷಣ ಕ್ಷಣವನ್ನೂ ಪ್ರತ್ಯಕ್ಷವಾಗಿ ಕಾಯುತ್ತಿದೆ ನಮ್ಮ ಕ್ಯಾಮರಾ ಜಗತ್ತು.

ಜೊತೆಯಲ್ಲಿ ಪ್ರತ್ಯಕ್ಷವಾಗಿ ಕಾಣದ ಎಷ್ಟೋ ವಿಚಾರಗಳನ್ನು ಪ್ರಾಮಾಣಿಕವಾಗಿ ಜಗತ್ತಿಗೆ ಎತ್ತಿತೋರಿಸಿದೆ ನಮ್ಮ ಕ್ಯಾಮರಾಗಳು, ಕ್ಷಣಮಾತ್ರದಲ್ಲಿ ಇಡೀ ಜಗತ್ತನ್ನೇ ತಾನಿರುವಲ್ಲಿಗ ಪ್ರತ್ಯಕ್ಷವಾಗಿ ತೋರಿಸುವ ಏಕೈಕ ಸಾಧನ ಕ್ಯಾಮರಾಗಳು. ಒಟ್ಟಾರೆ ಇಂದಿನ ಮನುಷ್ಯನಿಗೆ ಅತ್ಯಗತ್ಯವಾಗಿ ಬೇಕಾದ ವೈಜ್ಞಾನಿಕ ಸಾಧನ ಕ್ಯಾಮರ, ಇವತ್ತಿನ ಸಮಾಜದ ಕುರುಹುಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಛಾಯಾಗ್ರಹಣ ಕ್ಷೇತ್ರ ಹಗಳಿರುಳು ಶ್ರಮಿಸುತ್ತಿದೆ. ಇಂತಹ ಅಪರೂಪದ ಛಾಯಾಗ್ರಹಣ ಕ್ಷೇತ್ರವನ್ನು ನಮ್ಮ ಸರ್ಕಾರಗಳು, ರಾಜಕಾರಿಣಿಗಳು ನಿರ್ಲಕ್ಷಿಸುತ್ತಿರುವುದು ನಿಜಕ್ಕೂ ವಿಷಾದನೀಯ ವಿಚಾರ, ಈ ವೃತ್ತಿಯನ್ನು ನೆಚ್ಚಿಕೊಂಡು ಇಂದು ಕರ್ನಾಟಕ ಒಂದರಲ್ಲೇ ಲಕ್ಷಾಂತರ ಜನರು ಜೀವನ ಸಾಗಿಸುತ್ತಿದ್ದಾರೆ. ಛಾಯಾಗ್ರಾಹಕರ ವೃತ್ತಿಯ ನೋವು ನಲಿವುಗಳನ್ನು ಅವಲೋಕಿಸಿ ಸರ್ಕಾರ ಈ ಕೂಡಲೇ ಸ್ಪಂದಿಸಬೇಕು, ಛಾಯಾಗ್ರಾಹಕರ ಕುಟುಂಬಗಳನ್ನು ರಕ್ಷಿಸಬೇಕು, ಇದು ಇಡೀ ರಾಜ್ಯದ ಸಮಸ್ತ ಛಾಯಾಗ್ರಾಹಕರ ಆಗ್ರಹ.

ವರದಿ: ಹೆಚ್.ಎಸ್.ನಾಗೇಶ್, ಉಪಾಧ್ಯಕ್ಷ. ಕೆ.ಪಿ.ಎ.

Edited By

Ramesh

Reported By

Ramesh

Comments