ಅಭ್ಯರ್ಥಿಯ ಕೌನ್ಸಿಲಿಂಗ್ ಮಾಡಿ ಚುನಾವಣಾ ಸ್ಥಾನ ಕೊಡಲಾಗುವುದು: ಉಪೇಂದ್ರ

11 Dec 2017 5:59 PM |
2112 Report

.ಜನರ ಬಳಿಯೂ ಸಾಕಷ್ಟು ಉತ್ತಮ ಯೋಜನೆ, ಯೋಚನೆ ಅಭಿರುಚಿಗಳು ಇವೆ ಎಂದು ಹರ್ಷ ವ್ಯಕ್ತಪಡಿಸಿದರು. ರಾಜ್ಯದ ಪ್ರತಿಕ್ಷೇತ್ರದಿಂದ ಬರುವ ಪ್ರಮಾಣಿಕ ಮತ್ತು ಸೂಕ್ತ ಯೋಜನೆ ಹೊಂದಿದ ಅಭ್ಯರ್ಥಿಯ ಕೌನ್ಸಿಲಿಂಗ್ ಮಾಡಿ ಚುನಾವಣಾ ಸ್ಥಾನ ಕೊಡಲಾಗುವುದು. ಎಲ್ಲರಿಗೂ ಕ್ಷೇತ್ರ ಕೊಟ್ಟ ನಂತರ ಉಳಿದ ಕ್ಷೇತ್ರಕ್ಕೆ ಉಪೇಂದ್ರರವರು ನಿಲ್ಲುವುದಾಗಿ ಹೇಳಿದರು.

ವಿಧಾನಸೌಧದಿಂದ ಸುವರ್ಣಸೌಧಕ್ಕೆ ಯಾತ್ರೆ ಮುಕ್ತಾಯವಾಗುತ್ತಿದೆ ಪ್ರಜಾಕಾರಣ ಪ್ರಜೆಗಳ ರಾಜಕಾರಣ ಆಗಬೇಕೆಂದು ಚಿತ್ರನಟ ಉಪೇಂದ್ರ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜಕಾರಣ ನಮ್ಮೆಲ್ಲರ ಮನಸ್ಸಿನಲ್ಲಿದೆ. ಹಣ, ಜಾತಿ ವ್ಯವಸ್ಥೆಯ ಒಡೆದಾಳುವ ನೀತಿ ನಾವು ನೋಡುತ್ತಿದ್ದೇವೆ. ಹಾಲಿನಂತಹ ಮನಸ್ಸಿನ ಜನರನ್ನು, ಇಂದು ಮಜ್ಜಿಗೆ ಮಾಡಿ, ಆ ನಂತರ ಪನ್ನೀರ ಮಾಡಿ ಕೊನೆಗೆ ಫ್ರಿಜ್ ನಲ್ಲಿ ಜನರನ್ನು ರಾಜಕಾರಣಿಗಳು ಇಟ್ಟಿದ್ದಾರೆ ಎಂದರು.

ರಾಜ್ಯದ 226 ಸ್ಥಾನಗಳಿಗೆ ಶ್ರೀ ಸಾಮಾನ್ಯ ಜನ ಚುನಾವಣೆಗೆ ನಿಲ್ಲಲು ನಮ್ಮದು ವೇದಿಕೆ. ಬರೀ 20% ಜನರ ಬಳಿ ಮಾತ್ರ ಇಂದು ಅಧಿಕಾರ, ದುಡ್ಡು ಇದೆ. ಅದು ಉಳಿದ 80% ಶ್ರೀ ಸಾಮಾನ್ಯ ಜನರಿಗೆ ಹಂಚಬೇಕು‌. ಎಲ್ಲರಿಗೂ ಅಧಿಕಾರ, ಹಣ, ಅಂತಸ್ತು ಬರಬೇಕು. ರಾಜಕಾರಣ ಖಂಡಿತವಾಗಿ ಬಿಸಿನೆಸ್ ಆಗಬಾರದು. ಆದರೆ ಬುಸಿನೆಸ್ ಆಗಿದೆ. ಬಹು ಹಿಂದೆ ರಾಜರು ಇದ್ದರು ಮತ್ತು ಹೋದರು, ಅವರ ಜಾಗಕ್ಕೆ ರಾಜಕಾರಣಿಗಳು ಬಂದರು. ರಾಜಕಾರಣಿಗಳು ಬರೀ ರಾಜರಾಗಿ ಮೆರೆಯುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು. ನಮಗೆ ಗೆಲ್ಲಲೇಬೇಕೆಂದೇನಿಲ್ಲ, ಪಕ್ಷಕ್ಕೆ ಹಣವೂ ಇರುವುದಿಲ್ಲ, ಜಾತಿ, ಮತ, ಜನಸಂಪರ್ಕದ ಹಂಗು ಬೇಕಿಲ್ಲ. ಎಲೆಕ್ಷನ್ ಒಂದು ಸಮಾಜ ಸೇವೆ ಅದಕ್ಕಾಗಿ ಬರುವ ಜನರಿಗೆ ದೇಶವಾಸಿಗಳು ಓಟ್ ಹಾಕಿ ತಮ್ಮ ಅಭ್ಯರ್ಥಿಯನ್ನು ಆರಿಸಬೇಕು. ಅದಕ್ಕೆ ಜನರಿಗೆ ಆಸೆ- ಆಮೀಷ ಒಡ್ಡುವ, ಜಾಥಾ ಮಾಡುವ ಅವಶ್ಯಕತೆ ನಮಗಿಲ್ಲ. ಆಧುನಿಕ ಸಂಪರ್ಕ ತಂತ್ರಜ್ಞಾನದ ಮೂಲಕ ಜನರನ್ನು ತಲುಪುತ್ತೇವೆ. ಪ್ರಜಾರಾಜಕೀಯ ಸಾಕಷ್ಟು ಯಶಸ್ಸು ಸಾಧಿಸುತ್ತದೆ ಎಂದರು. ಅನ್ಯಪಕ್ಷಗಳನ್ನು ಮತ್ತು ರಾಜಕಾರಣಿಗಳನ್ನು ನಾವು ತೆಗಳುವುದಿಲ್ಲ. ಧನಾತ್ಮಕವಾಗಿ ಮುಂದುವರೆಯುವುದು ನಮಗಿಷ್ಟ ಎಂದರು.

 

Edited By

Uppendra fans

Reported By

upendra fans

Comments