ಉಪ್ಪಿಗೆ ಪತ್ರ ಬರೆದು ಕೆಪಿಜೆಪಿಗೆ ಬೆಂಬಲ ನೀಡುವಂತೆ ಕರೆ ಕೊಟ್ಟ ನಟ ದಿಗಂತ್
ನಿಜ ಹೇಳಬೇಕೆಂದರೆ, "ಪ್ರಜಾಕೀಯ' ಎಂದು ಹೆಸರು ಬದಲಾಯಿಸಿ ಪ್ರಜೆಗಳ ಕೆಲಸ ಮಾಡೋ ಕಾರ್ಮಿಕರು ನಾವು ಅಂತ "ಖಾಕಿ' ಬಟ್ಟೆ ಹಾಕಿಕೊಂಡು ಪಕ್ಷ ಲಾಂಚ್ ಮಾಡೋದೇ ಒಂದು "ಸೂಪರ್' ಕಲ್ಪನೆ. ಸಮಸ್ಯೆಗಳ ಬಗ್ಗೆ ಮಾತಾಡೋರು ಎಲ್ಲಾ ಕಡೆ ಸಿಗ್ತಾರೆ. ಪರಿಹಾರಗಳ ಬಗ್ಗೆ ಮಾತಾಡೋದು ಮರೆಯಾಗಿರ್ತಾರೆ. ಅಂತ ಪ್ರಜ್ಞಾವಂತರಿಗೆ ಒಂದು ವೇದಿಕೆ ಕಲ್ಪಿಸಿ, "ಓಂಕಾರ' ಹಾಕೋ ಒಬ್ಬ ವ್ಯಕ್ತಿ ಸಿಕ್ಕಿರೋದು ನಮ್ಮ ರಾಜ್ಯದ ಮಟ್ಟಿಗೆ ಹೆಮ್ಮೆ ಪಡುವಂತಹ ವಿಷಯ ಎಂದು ದಿಗಂತ್ ತಿಳಿಸಿದರು.
"ಸತ್ಯದೊಂದಿಗೆ ಪ್ರಯೋಗ'ಕ್ಕೆ ಹೊರಟಿರುವ ಈ ವಿನೂತನ ಪ್ರಯತ್ನದಲ್ಲಿ ಸೋಲಾದರೆ ಉಪೇಂದ್ರ ಅವರಿಗೆ ಅಂತಹ ದೊಡ್ಡ ನಷ್ಟವೇನೂ ಆಗುವುದಿಲ್ಲ. ಆದರೆ, ರಾಜ್ಯದ ಮಟ್ಟಿಗೆ ಅದು ಬಹುದೊಡ್ಡ ದುರಂತ. ನಾವು "ಪ್ರಜ್ಞಾವಂತ'ರೆಲ್ಲ ಎಂದು ನಮಗೆ ನಾವೇ "ಸರ್ಟಿಫಿಕೇಟ್' ಕೊಟ್ಟು ಕೊಳ್ಳುವಂತಹ ಮೂರ್ಖತನದ ಪ್ರದರ್ಶನ ಆದೀತು ಎಂದೇ ಹೇಳಬಹುದು. ಇಂದು ರಾಜಕಾರಣಿಗಳು "ಕೆಪಿಜೆಪಿ' ಬಗ್ಗೆ ಹಗುರವಾಗಿ ಮಾತನಾಡುವುದನ್ನು ನೋಡಿದರೆ ನೋವಾಗುತ್ತದೆ. ಅದಕ್ಕಿಂತ ದುಃಖದ ವಿಚಾರವೆಂದರೆ ಅರ್ಹತೆಯೇ ಇಲ್ಲದವರನ್ನು ನಾಯಕರನ್ನಾಗಿ ಮಾಡಿ ಪ್ರತಿದಿನ ಮೋಸ ಹೋಗುತ್ತಿರುವ "ಅಸಾಮಾನ್ಯ ಪ್ರಜೆ'ಗಳು ಕೂಡ ಹಣವಿಲ್ಲದೆ ಪಕ್ಷ ಕಟ್ಟಲು ಸಾಧ್ಯವೇ ಎಂದು ಮಾತನಾಡುತ್ತಿರುವುದು.
ಹಣ ಪಡೆಯದೆ ಯೋಗ್ಯತೆ ಇರುವವರನ್ನು ಆರಿಸಲು ಸಾಧ್ಯವಾದರೆ ಹಣವಿಲ್ಲದ ಪಕ್ಷ ಕಟ್ಟುವುದು ಏಕೆ ಸಾಧ್ಯವಾಗುವುದಿಲ್ಲ ಹೇಳಿ? ಕಡೆಯದಾಗಿ ಅಸಾಮಾನ್ಯ ಪ್ರಜೆಗಳಲ್ಲಿ ನಾನು ಕೇಳುವುದಿಷ್ಟು. ನಮ್ಮ ಹಣವಾದ ಲಕ್ಷಲಕ್ಷ ಕೋಟಿಕೋಟಿ ಲೂಟಿ ಆಗದ ಹಾಗೆ ಅಭಿವೃದ್ಧಿಗೆ ಬಳಕೆಯಾಗಬೇಕು ಅನ್ನಿಸಿದರೆ "ಪ್ರಜಾಕೀಯ' ಸೆಲೆಕ್ಟ್ ಮಾಡಿ. 100 ರೂ ಹಣದಲ್ಲಿ 15 ರೂ ಮಾತ್ರ ಬಳಕೆ ಆಗುತ್ತಿರುವ ಈಗಿನ "ದೋಖಾ ಸಿಸ್ಟಂ' ಬದಲಾಗಿ 100ಕ್ಕೆ 100 ರೂ ಬಳಕೆ ಆಗುವ "ಗ್ಯಾರಂಟಿ ವಾರಂಟಿ ಸಿಸ್ಟಂ' ಬೇಕು ಅನ್ನಿಸಿದರೆ "ಕೆಪಿಜೆಪಿ'ಗೆ ವೋಟ್ ಮಾಡಿ. ಗೆದ್ದ ನಾಯಕರು ತಮ್ಮ "ಆರ್ಟ್' ಬಳಸಿ ಕೆಲವೇ ವರ್ಷಗಳಲ್ಲಿ ಹಳ್ಳಿ-ಪಟ್ಟಗಳನ್ನು "ಸ್ಮಾರ್ಟ್' ಆಗಿ ಮಾಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುವುದಕ್ಕೆ ಸಹಕಾರ ನೀಡಬೇಕೆನಿಸಿದರೆ "ಉಪ್ಪಿ'ಯನ್ನು ಅಪ್ಪಿಕೊಳ್ಳುವ ಕೆಲಸ ಮಾಡಿ. ಇದು ಸಾಧ್ಯ ಆಗದೆ ಹೋದರೆ ಮತ್ತೂಮ್ಮೆ ಒತ್ತಿ ಹೇಳುತ್ತೇನೆ ಎಂದರು.
Comments