ಎಸ್. ಆರ್.ಹಿರೇಮಠ ವಿನಾಕಾರಣ ಆರೋಪ ಮಾಡುತ್ತಿದ್ದಾರೆ: ಉಪೇಂದ್ರ ಅಸಮಾಧಾನ

ಎಸ್.ಪಿ.ಎಸ್ ಅಧ್ಯಕ್ಷ ಎಸ್.ಆರ್.ಹಿರೇಮಠ ಅವರು ರೈತರ ಕೃಷಿಭೂಮಿಯಲ್ಲಿ ರೆಸಾರ್ಟ ಕಟ್ಟಿದ್ದಾರೆ ಎಂದು ನ್ಯಾಯಲಯಕ್ಕೆ ಮೊರೆ ಹೋಗಿದ್ದರು. ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಆದರೂ ಹಿರೇಮಠ ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಉಪೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ರೆಸಾರ್ಟ್ ವಿಷಯದಲ್ಲಿ ಮೂಗು ತೂರಿಸುತ್ತಿರುವ ಸಮಾಜ ಪರಿವರ್ತನಾ ಅಧ್ಯಕ್ಷ ಎಸ್. ಆರ್.ಹಿರೇಮಠ ನ್ಯಾಯಾಲಯಕ್ಕಿನ ದೊಡ್ಡವರೆ? ಎಂದು ಕೆಪಿಜೆಪಿ ಪಕ್ಷದ ಸಂಸ್ಥಾಪಕ, ಚಲಚಿತ್ರ ನಟ ಉಪೇಂದ್ರ ಪ್ರಶ್ನಿಸಿದರು. ರಾಜ್ಯದಲ್ಲಿ ವಿಶ್ವಾಧರಿತ ರಾಜಕಾರಣ ಬೇಕಿದೆ. ಮುಗ್ದ ಮನಸಿನ ಜನರನ್ನು ಪ್ರಿಡ್ಜನಲ್ಲಿ ಇಟ್ಟಿದ್ದಾರೆ. ಈಗ ಬೆಕ್ಕಿಗೆ ಗಂಟೆ ಕಟ್ಟಿಯಾಗಿದೆ. ಅದನ್ನು ಜನರು ಭಾರಿಸಿ ಕೆಪಿಜೆಪಿ ಪಕ್ಷವನ್ನು ಆಶೀರ್ವಾದ ಮಾಡಬೇಕೆಂದು ವಿನಂತಿಸಿಕೊಂಡರು.
Comments