ಕಾಣಿಸುವ ರಾಜಕಾರಣ ಬೇರೆ, ಕಾಣಿಸದ ನಮ್ಮ ಪ್ರಜಾಕರಣವೇ ಬೇರೆ: ಉಪೇಂದ್ರ

ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲುತ್ತದೆ ಎಂಬುದು ಮುಖ್ಯವಲ್ಲ. ಸತ್ಯದ ಹಾದಿಯಲ್ಲಿ ಇಡುವ ಒಂದೊಂದು ಹೆಜ್ಜೆಯೂ ನಮಗೆ ಗೆಲುವು. ಕಾಣಿಸುವ ರಾಜಕಾರಣ ಬೇರೆ. ಕಾಣಿಸದ ನಮ್ಮ ಪ್ರಜಾಕರಣವೇ ಬೇರೆ. ವ್ಯವಸ್ಥೆ ಬದಲಾಯಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ ಎಂದು ಉಪೇಂದ್ರರವರು ಹೇಳಿದ್ದಾರೆ.
ರಾಜಕೀಯ ದೃಷ್ಟಿಯಿಂದ ನಡೆಸುವ ದೊಡ್ಡ ಸಮಾವೇಶಗಳು ಜಾತಿ, ಧರ್ಮ ಹಾಗೂ ದುಡ್ಡಿನ ರಾಜಕಾರಣದ ಮೂಲವಾಗಿವೆ. ಜನ ಕೂಡ ವಸ್ತುಸ್ಥಿತಿ ಮರೆತು, ಅಂತಹ ರಾಜಕಾರಣಕ್ಕೆ ಹೊಂದಿಕೊಂಡಿದ್ದಾರೆ. ಆ ಮನಸ್ಥಿತಿಯನ್ನು ಬದಲಾಯಿಸಬೇಕಿದೆ. ಹಾಗಾಗಿ, ನಾನು ಹಣದ ಹೊಳೆ ಹರಿಸಿ, ಜನರನ್ನು ಸೇರಿಸಿ ಸಮಾವೇಶ ಮಾಡುವುದಿಲ್ಲ. ಎಲ್ಲಾ ಕಡೆಗೂ ನಾನೇ ಭೇಟಿ ನೀಡಿ, ಪಕ್ಷದ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ. ನೀವೇ (ಮಾಧ್ಯಮದವರೇ) ನಮ್ಮ ಪ್ರಚಾರಕರ್ತರು. ಇದು ಸ್ಮಾರ್ಟ್ಫೋನ್ ಯುಗ. ಜನರಿಗೆ ನಮ್ಮ ವಿಚಾರ ತಲುಪುತ್ತದೆ ಎಂಬ ನಂಬಿಕೆ ಇದೆ' ಎಂದಿದ್ದಾರೆ. ಬದಲಾವಣೆಗಾಗಿ ಈ ಹಾದಿ ತುಳಿದಿದ್ದೇನೆ. ಆ ಬಗ್ಗೆ ನನಗೆ ನಂಬಿಕೆ ಇದೆ. ನಂಬಿಕೆ ಇಲ್ಲದೆ ಬದುಕುವುದೇ ವ್ಯರ್ಥ. ಸಾಯುವವರೆಗೆ ಪ್ರಯತ್ನ ಮಾಡುತ್ತೇನೆ.
Comments