ತಾಯಿ ಪರ ಪ್ರಚಾರಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಪುತ್ರ ನಿಖಿಲ್
ಜೆಡಿಎಸ್ ನಾಯಕಿ ಅನಿತಾ ಕುಮಾರಸ್ವಾಮಿ ಪರ ಈಗಿಂದಲೇ ಚುನಾವಣಾ ಪ್ರಚಾರಕ್ಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಚನ್ನಪಟ್ಟಣದ ಜೆಡಿಎಸ್ ಯುವ ಮುಖಂಡ ಆಶೀಷ್ ಮನೆಗೆ ಇಂದು ಭೇಟಿ ನೀಡಿ ಜೆಡಿಎಸ್ ಬೆಂಬಲಿಸುವಂತೆ ಪಕ್ಷದ ಕಾರ್ಯಕರ್ತಲ್ಲಿ ಮನವಿ ಮಾಡಿದ್ದಾರೆ.
ಇನ್ನು ನಾನು ಈ ಕುಟುಂಬದಲ್ಲಿ ಹುಟ್ಟಿರುವುದಕ್ಕೆ ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಚುರುಕಾಗಿರುತ್ತೇನೆ. ನಾನು ರಾಜಕೀಯಕ್ಕೆ ಬರುವುದನ್ನ ಜನ ನಿರ್ಧಾರ ಮಾಡುತ್ತಾರೆ ಎಂದು ಪರೋಕ್ಷವಾಗಿ ರಾಜಕೀಯಕ್ಕೆ ಬರುವ ಮುನ್ಸೂಚನೆಯನ್ನೂ ನಿಖಿಲ್ ನೀಡಿದರು. ನಿಖಿಲ್ ಕುಮಾರಸ್ವಾಮಿ ಭೇಟಿ ಹಿನ್ನೆಲೆಯಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಅನಿತಾ ಕುಮಾರಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.
ನನ್ನ ತಾಯಿಗೆ ರಾಜಕಾರಣಕ್ಕೆ ಬರುವ ಉದ್ದೇಶವಿರಲಿಲ್ಲ. ಆದರೆ, ಮಧುಗಿರಿ ಕ್ಷೇತ್ರದ ಪಕ್ಷದ ಮುಖಂಡರ ತೀರ್ಮಾನಕ್ಕೆ ಬೆಲೆ ಕೊಟ್ಟು ಸ್ಪರ್ಧಿಸಿದ್ದರು. ನಂತರ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಮುಖಂಡರು ಒತ್ತಾಯಿಸಿದ್ದರು. ಹಾಗಾಗಿ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದರು. ಕಾರ್ಯಕರ್ತರ, ಮುಖಂಡರ ತೀರ್ಮಾನಕ್ಕೆ ನಾವು ಯಾವಾಗಲೂ ತಲೆಬಾಗುತ್ತೇವೆ. ಹಾಗೆ ಬರುವ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಯಾರೇ ಸ್ಪರ್ಧಿಸಿದರು ಜನ ನಮ್ಮನ್ನು ಕೈಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
Comments