ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಯೋಚನೆ ಇಲ್ಲ : ಉಪೇಂದ್ರ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಯೋಚನೆ ಇಲ್ಲ. ನಮ್ಮ ಚಿಂತನೆ ಒಪ್ಪುವ ಯಾರು ಬೇಕಾದರೂ ನಮ್ಮ ಪಕ್ಷ ಸೇರಬಹುದು ಎಂದು ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ)ದ ಸಂಸ್ಥಾಪಕ, ನಟ ಉಪೇಂದ್ರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯಕ್ಕೆ ಹಣ ಹಾಗೂ ಜಾತಿ ಅನಿವಾರ್ಯವಾಗಿರಬಹುದು. ಆದರೆ ಪ್ರಜಾಕೀಯಕ್ಕೆ ಇದರ ಅವಶ್ಯಕತೆ ಇಲ್ಲ ಎಂದರು.
Comments