ರಾಜಕೀಯದಲ್ಲಿ ಹಣ ಬಲ ಸೋತು, ಸಾಮಾನ್ಯ ಜನ ನಾಯಕರಾಗಬೇಕು : ಉಪೇಂದ್ರ
ರಾಜಕೀಯದಲ್ಲಿ ಹಣ ಬಲ ಸೋತು, ಸಾಮಾನ್ಯ ಜನ ನಾಯಕರಾಗಿ ಬೆಳೆಯಬೇಕು ಎಂಬುದೇ ಪ್ರಜಾಕಾರಣದ ಮುಖ್ಯ ಉದ್ದೇಶ ಎಂದು ಖ್ಯಾತ ಚಿತ್ರ ನಟ ಹಾಗೂ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.
ದೇಶದಲ್ಲಿ ಬದಲಾವಣೆ ಬೇಕಿದೆ. ಆದರೆ ಯಾರು ಮಾಡಬೇಕು ಎನ್ನುವ ಸಂಶಯವಿದೆ. ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ತಿಳಿದುಕೊಳ್ಳುವುದೇ ಇದು ಸಾಧ್ಯ ಎಂದು ನಿಶ್ಚಯಿಸಿ ಬದಲಾವಣೆ ತರಬೇಕಾದ ಅವಶ್ಯಕತೆ ಇದೆ ಎಂದರು. ರಾಜ್ಯದ 224 ಕ್ಷೇತ್ರಗಳಲ್ಲೂ ನಮ್ಮ ಪಕ್ಷದಿಂದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದರು ಹೇಳಿದರು.
Comments