ಡಿ. 10 ರಿಂದ ಮೈನಾರಿಟಿಸ್ ಎಕ್ಸ್‌ಪ್ರೆಸ್ ರಾಜ್ಯಾದ್ಯಂತ ಸಂಚರಿಸಲಿದೆ : ಎಚ್ ಡಿಕೆ

ನಮ್ಮ ಪಕ್ಷದಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇಲ್ಲ ಎಂದು ಸ್ಪಷ್ಟಪಡಿಸಿದ ಎಚ್ ಡಿಕೆ, ಈ ಹಿಂದೆ ಸೂಟ್‌ಕೇಸ್ ಸಂಸ್ಕೃತಿ ನಡೆಸುವವರು ನಮ್ಮ ಪಕ್ಷದಲ್ಲಿದ್ದರು. ಆದರೆ ಈಗ ಅವರೆಲ್ಲಾ ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಂದು ಹೇಳಿದರು.
ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಜನರ ಮನವೊಲಿಸಿ ಪಕ್ಷದ ಸಂಘಟನೆಗೆ ಒತ್ತು ನೀಡುವ ಸಲುವಾಗಿ ತುಮಕೂರಿನಿಂದ ಮೈನಾರಿಟಿಸ್ ಎಕ್ಸ್‌ಪ್ರೆಸ್ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಡಿ.10 ರಂದು ಈ ಮೈನಾರಿಟಿಸ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಾಗುವುದು ಎಂದರು.ಮೈನಾರಿಟಿಸ್ ಎಕ್ಸ್‌ಪ್ರೆಸ್ ಡಿ.10 ರಿಂದ ರಾಜ್ಯಾದ್ಯಂತ ಸಂಚರಿಸಲಿದೆ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
Comments