ಸಾಮಾಜಿಕ ಜಾಲತಾಣ ತಂತ್ರದಲ್ಲಿ ಎಚ್ ಡಿಕೆ ಮತ್ತೊಂದು ಹೆಜ್ಜೆ
ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಾಕಷ್ಟು ಪ್ರಸಿದ್ಧರಾಗಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಅವರು ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.
ಪ್ರತೀ ದಿನ ಕುಮಾರಸ್ವಾಮಿ ಅವರ ಸುದ್ದಿಯನ್ನು ಮೊಬೈಲ್ ಮೂಲಕ ಪಡೆಯುವ ಯೋಜನೆಗೆ ಅವರ ತಾಂತ್ರಿಕ ಸಲಹೆಗಾರರು ಯೋಜನೆ ಸಿದ್ಧಪಡಿಸಿದ್ದಾರೆ. 'ನಮ್ಮ ಎಚ್ ಡಿಕೆ' ಜಾಲತಾಣ ಈಗಾಗಲೇ ಫೇಸ್‌ಬುಕ್ , ಟ್ವಿಟರ್, ಯುಟ್ಯೂಬ್, ಸೌಂಡ್ ಕ್ಲೌಡ್‌ನಲ್ಲಿ ಜನಪ್ರಿಯವಾಗಿದ್ದು, ಈಗ ಅದರ ಮುಂದುವರಿಕೆಯಾಗಿ ಮೊಬೈಲ್ ಸೇವೆ ಆರಂಭಿಸಲಿದೆ.
ಮೊಬೈಲ್ ಸಂಖ್ಯೆ 94838 6999 ಗೆ ಒಂದು ಮಿಸ್ ಕಾಲ್ ಕೊಟ್ಟರೆ ಸಾಕು ಆ ಸಂಖ್ಯೆ 'ನಮ್ಮ ಎಚ್ ಡಿಕೆ' ಸಾಮಾಜಿಕ ಜಾಲತಾಣದಲ್ಲಿ ನೊಂದಾಯಿಸಲ್ಪಡುತ್ತದೆ. ಆ ನಂತರ ಪ್ರತೀ ದಿನ ಮೂರು ಬಾರಿ ಎಚ್. ಡಿ.ಕುಮಾರಸ್ವಾಮಿ ಅವರ ಸಭೆ ಸಮಾರಂಭ, ಭಾಷಣ, ಸುದ್ದಿಗೋಷ್ಠಿ ಎಲ್ಲವೂ ಆ ನಂಬರ್‌ನ ಮಾಲೀಕರಿಗೆ ಸಿಗುತ್ತದೆ.ಕೇವಲ ಸುದ್ದಿಗಳಷ್ಟೇ ಅಲ್ಲದೆ ಆಡಿಯೋ, ವಿಡಿಯೋಗಳನ್ನೂ ಕಳುಹಿಸಲಾಗುತ್ತದೆ. ಪ್ರತೀ ದಿನ ಬೆಳಗ್ಗೆ ಎಚ್ ಡಿಕೆ ಅವರ ಕಾರ್ಯಕ್ರಮದ ವಿವರ ನೀಡುವ ಮೂಲಕ ಆರಂಭವಾಗುವ ಈ ಸುದ್ದಿ ಸೇವೆ ದಿನದ ಅಂತ್ಯಕ್ಕೆ ರೌಂಡ್ ಅಪ್ ನೀಡುವ ಮೂಲಕ ಮುಕ್ತಾಯವಾಗುತ್ತದೆ.
ಅಂತರ್ಜಾಲ ಆಧಾರಿತ ಮಾಧ್ಯಮಗಳು ಈಗ ಪ್ರಬಲವಾಗಿರುವುದರಿಂದ ನಮ್ಮ ವಿಚಾರಗಳನ್ನು ಆ ಮಾಧ್ಯಮದ ಮೂಲಕವೂ ಜನರಿಗೆ ತಲುಪಿಸಲು ಈ ಯೋಜನೆ ಹೊಂದಿದ್ದೇವೆ'. 'ಅಮೆರಿಕಾದ ಚುನಾವಣೆಗಳು ಹಾಗೂ ಕಳೆದ ಸಾಲಿನ ಭಾರತದ ಚುನಾವಣೆಗಳಲ್ಲಿ ಸಾಮಾಜಿಕ ಜಾಲತಾಣಗಳು ಎಂತಹ ಮಹತ್ವದ ಪಾತ್ರ ವಹಿಸಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ರಾಜ್ಯದ ಹಿತ ಕಾಯಲು ಸಿದ್ಧವಾಗಿರುವ ನಾವು ಜನರನ್ನು ತಲುಪುವ ಎಲ್ಲಾ ಮಾರ್ಗವನ್ನೂ ಬಳಸುತ್ತೇವೆ' ಎಂದು ಎಚ್. ಡಿ. ಕುಮಾರಸ್ವಾಮಿ ಅವರು ತಿಳಿಸಿದರು. ಮಿಸ್ ಕಾಲ್‌ಗಳನ್ನೂ ನೋಂದಾಯಿಸುವ ಸೇವೆ ನಾಳೆಯಿಂದ ಆರಂಭವಾಗಲಿದೆ.
Comments