108 ಓಡಾಡುವ ದಾರಿಯಲ್ಲೇ ನೂರೆಂಟು ಗುಂಡಿಗಳು!






ದೊಡ್ಡಬಳ್ಳಾಪುರ ನಗರದೊಳಕ್ಕೆ ಸಂಪರ್ಕ ಕಲ್ಪಿಸಲು ಇರುವುದು ಎರಡೇ ಪ್ರಮುಖ ರಸ್ತೆ. ಒಂದು ಡಿ.ಕ್ರಾಸ್ ರಸ್ತೆ ಮತ್ತೊಂದು ರೈಲ್ವೆ ಸ್ಟೇಷನ್ ರಸ್ತೆ, ತುಮಕೂರು, ಗೌರಿಬಿದನೂರು, ಚಿಕ್ಕಬಳ್ಳಾಪುರ, ದೇವನಹಳ್ಳಿಯಿಂದ ಬರುವುದಕ್ಕೆ ನಗರದ ಡಿ.ಕ್ರಾಸ್ ರಸ್ತೆ ಮತ್ತು ಬೆಂಗಳೂರಿನಿಂದ ಬರುವುದಕ್ಕೆ ರೈಲ್ವೆ ಸ್ಟೇಷನ್ ರಸ್ತೆ. ಮುಖ್ಯವಾಗಿ ಈ ಪ್ರಮುಖ ರಸ್ತೆಯಲ್ಲಿಯೇ ಸುಮಾರು 5 ರಿಂದ 6 ಆಸ್ಪತ್ರೆಗಳಿವೆ. ಆ ಎಲ್ಲಾ ಆಸ್ಪತ್ರೆ ತಲುಪಲು ಇರುವ ಮುಖ್ಯ ರಸ್ತೆಯೇ ಇದು. ದೊಡ್ಡಬಳ್ಳಾಪುರ ನಗರಕ್ಕೆ ದಿನನಿತ್ಯ ಬರುವ ಸಾವಿರಾರು ವಾಹನಗಳು ಓಡಾಡುವುದು ಇದೇ ರಸ್ತೆಯಲ್ಲಿಯೇ. ಎಲ್ಲಕ್ಕಿಂತ ಮುಖ್ಯವಾಗಿ ಆಂಬ್ಯುಲೆನ್ಸ್ ಗಳು ಓಡಾಡುವ ದಾರಿ ಇದು! ತುರ್ತುಸ್ಥಿತಿಯಲ್ಲಿರುವ ರೋಗಿಯನ್ನು ವಾಹನದಲ್ಲಿ ಇಟ್ಟುಕೊಂಡು ಈ ರಸ್ತೆಯಲ್ಲಿ ಹೇಗೆ ಓಡಾಡಬಹುದು ನೀವೇ ಚಿಂತಿಸಿ. ಒಂದೆಡೆ ನಾಲ್ಕು ಚಕ್ರಕ್ಕೂ ಅಧಿಕ ಚಕ್ರಗಳ ವಾಹನಗಳಲ್ಲಿ ಓಡಾಡುವುದು ಈ ಪರಿಸ್ಥಿತಿಯಾದರೆ ಇನ್ನೊಂದೆಡೆ ಬೈಕ್, ಸ್ಕೂಟರ್ ನಲ್ಲಿ ಓಡಾಡುವರ ಸ್ಥಿತಿ ಅದೋಗತಿ!
ಗುಂಡಿಗಳನ್ನು ತಪ್ಪಿಸುವುದು ಒಂದು ಕೆಲಸವಾದರೆ, ಧೂಳಿನಿಂದ ಮೂಗು ಮತ್ತು ಬಾಯಿಯನ್ನು ರಕ್ಷಿಸಿಕೊಳ್ಳುವುದು ಇನ್ನೊಂದು ಕೆಲಸ!
ಸಾಲು ಸಾಲಾಗಿ ಆಸ್ಪತ್ರೆಗಳೇ ಇರುವ ರಸ್ತೆಯಲ್ಲಿ ಓಡಾಡುವ ಜನರು ಮಾತ್ರ ಆದೇ ರಸ್ತೆಯಲ್ಲಿನ ಧೂಳು ಕುಡಿದು ಮತ್ತದ್ದೆ ಆಸ್ಪತ್ರೆಗಳಿಗೆ ಸೇರುವುದು ಮಾತ್ರ ನಿಂತಿಲ್ಲ.
#ವಿಕಾಸದ_ಹಾದಿ
#ನನ್ನ_ಕನಸಿನ_ದೊಡ್ಡಬಳ್ಳಾಪುರ
#ನನ್ನ_ಕನಸಿನ_ಕರ್ನಾಟಕ
ವರದಿ: ಚೇತನ್ ಕೃಷ್ಣ, ಯುವ ಬ್ರಿಗೇಡ್,
ಫೋಟೋ: ಶರತ್ ಗೌಡ
Comments