ಅಯ್ಯಪ್ಪಸ್ವಾಮಿ ದೇವಾಲಯದ ೪೩ನೇ ವಾರ್ಷಿಕ ಮಂಡಲ ಪೂಜಾ ಕಾರ್ಯಕ್ರಮ





ದಿನಾಂಕ ೧೭-೧೨-೨೦೧೭ ರ ಭಾನುವಾರದಂದು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ೪೩ನೇ ವಾರ್ಷಿಕ ಮಂಡಲ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ ೫ ಘಂಟೆಗೆ ಆಗಮ ಪ್ರವೀಣ ಶ್ರೀ ಶಿವಶಂಕರ ಆಚಾರ್ಯ ಮತ್ತು ಸಂಗಡಿಗರಿಂದ ಗಣಹೋಮ, ೧೧ ಘಂಟೆಗೆ ಭಜನೆ, ಮದ್ಯಾನ್ಹ ೧೨ಕ್ಕೆ ಶ್ರೀ ಶ್ರೀ ಸ್ವಾಮಿ ಮಧುಸೂದನಾನಂದಪುರಿ, ಪೀಠಾಧಿಪತಿಗಳು ಓಂಕಾರ ಆಶ್ರಮ ಮಹಾ ಸಂಸ್ಥಾನ, ಬೆಂ. ಇವರಿಂದ ಆಶೀರ್ವಚನ, ಮದ್ಯಾನ್ಹ ೧ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ೪ ಘಂಟೆಗೆ ಪಾಲಕುಂಭ ಸಮೇತ ವಿದ್ಯುತ್ ದೀಪಗಳಿಂದ ಅಲಂಕೃತವಾದ ರಥದಲ್ಲಿ ಶ್ರೀ ಅಯ್ಯಪ್ಪಸ್ವಾಮಿಯವರ ಉತ್ಸವ ಮಕ್ಕಳ ದೀಪಗಳೊಂದಿಗೆ, ಜಾನಪದ ಕಲಾವಿದ ಶ್ರೀ ಎನ್.ರುದ್ರೇಶ್ ಪ್ರಸಾದ್ ಮತ್ತು ತಂಡದವರಿಂದ ವೀರಭದ್ರ ಕುಣಿತ ಮತ್ತು ಪಾಲ್ಕಾಡ್ ನ ಕಲಾನಿಲಯಂ ತಂಡದವರಿಂದ ಚಂಡೆ ವಾಧ್ಯದೊಂದಿಗೆ ಮೆರವಣಿಗೆ ಎರ್ಪಡಿಸಲಾಗಿದೆ.
Comments