ವಾಟ್ ಈಸ್ ದೇವೇಗೌಡ ಎಂದು ಮುಂದೆ ನಡೆಯುವ ಫೈಟಿಂಗ್ ಗೊತ್ತಾಗುತ್ತೆ : ಎಚ್ ಡಿಡಿ

ಮೊದಲು ದೇವೇಗೌಡ ಏನು ಎಂದು ತಿಳಿದುಕೊಳ್ಳಲಿ. ವಾಟ್ ಈಸ್ ದೇವೇಗೌಡ ಎಂದು ಮುಂದೆ ನಡೆಯುವ ಫೈಟಿಂಗ್ ಇಂದ ಗೊತ್ತಾಗುತ್ತದೆ. ಮೇ 9 ಕ್ಕೆ ಕಿಂಗ್ ಯಾರು, ಕಿಂಗ್ ಮೇಕರ್ ಯಾರು ಎಂದು ಗೊತ್ತಾಗುತ್ತದೆ. ಕೆಸಿ ರೆಡ್ಡಿಯಿಂದ ಇಲ್ಲಿವರೆಗೂ ಆಗಿದ್ದ ಸಿಎಂ ಎಲ್ಲರೂ ಭ್ರಷ್ಟರೆ. ಸಿಎಂ ಸಿದ್ದರಾಮಯ್ಯ ಮಾತ್ರ ಉತ್ತಮ. ಆಗಾದ್ರೆ ಈ ಹಿಂದೆ ಅಧಿಕಾರಿ ನಡೆಸಿದ ನಾವೆಲ್ಲ ಭ್ರಷ್ಟರೆ ? ಮಾಜಿ ಪ್ರಧಾನಿ ವ್ಯಂಗ್ಯ ವಾಡಿದ್ದಾರೆ.
ಕುಮಾರಸ್ವಾಮಿ ಎರಡು ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಮಾತನಾಡಿ, ಕುಮಾರಸ್ವಾಮಿ ರಾಮನಗರದಲ್ಲಿ ಸ್ಪರ್ಧಿಸಲಿ, ಎರಡು ಕಡೆ ನಿಂತರೆ ಜನರಿಗೆ ಗೊಂದಲ ಉಂಟಾಗುತ್ತೆ. ಹಾಗಾದರೆ 2018 ರ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ ಕಿಂಗ್ ಮೇಕರ್ ಆಗುವ ವಿಚಾರ. ರಾಜ್ಯದಲ್ಲಿ ಧರ್ಮಸಿಂಗ್ ಗೆ ಬೆಂಬಲ ನೀಡಿದ್ದೆವು. ನನ್ನ ಮಗ ಬಿಜೆಪಿ ಸಾಹವಾಸ ಮಾಡಿ ನೋಡಿದಾನೆ. ಜನ ಬೆಂಬಲ ಕೊಡಲಿಲ್ಲ ಅಂದರೆ ವಿರೋಧ ಪಕ್ಷವಾಗಿ ಕೆಲಸ ಮಾಡ್ತೇವೆ. ಯಾರ ಜೊತೆಯಲ್ಲೂ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.
Comments