ಅಧ್ಯಕ್ಷ ಗಾದಿಗೆ ಜಿದ್ದಾ ಜಿದ್ದಿ....ಜಾತಿ ರಾಜಕಾರಣವೋ?...ಕೊಟ್ಟ ಮಾತೋ?




ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನದ ಅವಧಿ ಪ್ರಸ್ತುತ ಕೊನೆಯ ೧೫ ತಿಂಗಳ ಅಧಿಕಾರಾವಧಿಗೆ ಡಿ. ೧೧ ರಂದು ನಡೆಯಲಿರುವ ಚುನಾವಣೆಯಲ್ಲಿ ದೇವಾಂಗ ಸಮುದಾಯದ ಅಭ್ಯರ್ಥಿಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಕಾಂಗ್ರೆಸ್ ಶಾಸಕ ಟಿ. ವೆಂಕಟರಮಣಯ್ಯ, ಬಿಜೆಪಿಯ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ ಮತ್ತು ಕೇಂದ್ರ ರೇಷ್ಮೆ ಮಂಡಲಿಯ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ರವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ, ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ಕಾರ್ಯದರ್ಶಿ ಎ.ಕೆ, ರಮೇಶ್, ನಗರದಲ್ಲಿ ಬಹುಸಂಖ್ಯಾತರಾಗಿರುವ ದೇವಾಂಗ ಸಮುದಾಯಕ್ಕೆ ೧೬ ವರ್ಷಗಳಿಂಗ ಅಧ್ಯಕ್ಷ ಗಾದಿ ಸಿಕ್ಕಿಲ್ಲ, ಈ ನಿಟ್ಟಿನಲ್ಲಿ ೧೮ನೇ ವಾರ್ಡ್ ನಿಂದ ಆಯ್ಕೆಯಾಗಿರುವ ಪಿ.ಸಿ.ಲಕ್ಷ್ಮಿನಾರಾಯಣ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Comments