ರಸಪ್ರಶ್ನೆಯಿಂದ ತಿಳಿದುಬಂದ ಉತ್ತರ
ಇತ್ತೀಚಿಗೆ ರಾಜಕೀಯ ಪಕ್ಷಗಳಲ್ಲಿ ವ್ಯಂಗ್ಯವಾಗಿ ಹೀಗೊಂದು ರಸಪ್ರಶ್ನೆ ಎಂದು ಒಬ್ಬರನ್ನೊಬ್ಬರು ಕಾಲು ಎಳೆಯುತ್ತಾ ಇದ್ದಾರೆ.
ಪ್ರಥಮ ಬಾರಿಗೆ ಈ ರೀತಿ ಪ್ರಾರಂಭಿಸಿದರು ಕಾಂಗ್ರೆಸ್ನ ರಮ್ಯಾ. ಹುಣಸೂರು ಗಲಾಟೆಯಾದ ನಂತರ ಪ್ರತಾಪ್ ಸಿಂಹರವರು ಕೂಡ ಇದೇ ರೀತಿ ವ್ಯಂಗ್ಯವಾಗಿ ಟೀಕೆ ಮಾಡಲು ಆರಂಭಿಸಿದರು. ಇವೆಲ್ಲವುದರ ನಡುವೆ ತನ್ನ ಪಾಡಿಗೆ ಪಕ್ಷ ಸಂಘಟನೆ ಮಾಡಿಕೊಂಡು ಇರುತ್ತಿದ್ದ ಜೆಡಿಎಸ್ ಯುವಕರು ರಾಷ್ಟ್ರೀಯ ಪಕ್ಷಗಳನ್ನು ಟೀಕೆ ಮಾಡಲು ಪ್ರಾರಂಭಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ಟೀಕೆ ಮಾಡಲು Karnataka JDS ಪೇಜ್ ನಲ್ಲಿ ಹಾಕಿದ್ದ ಪೋಸ್ಟ್ ಗಳು ಲಕ್ಷಕ್ಕೂ ಮೀರಿ ಜನರನ್ನು ತಲುಪಿವೆ ಮತ್ತು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸಾಮಾಜಿಕ ತಾಣದಲ್ಲಿ ಹೆಚ್ಚಿನ ಜನರು ಈ ಪೋಸ್ಟ್ ಗೆ ಕಾಮೆಂಟ್ ಮಾಡುತ್ತ ಇರುವುದು ನೋಡಿದರೆ 2018ರಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ನಾಡಿನ ಜನತೆ ಕೈಕೊಟ್ಟು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಕೈ ಹಿಡಿಯುವ ಸಂಭವ ಹೆಚ್ಚಾಗಿದೆ
Comments