ಡಿ.10 ಕ್ಕೆ ಜೆಡಿಎಸ್​​ ಅಲ್ಪಸಂಖ್ಯಾತರ ರಾಜ್ಯಮಟ್ಟದ ಸಮಾವೇಶ

07 Dec 2017 5:13 PM | Politics
54 0 Report

ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯಮಟ್ಟದ ಸಮಾವೇಶ ಇದೇ ಡಿ10ರಂದು ತುಮಕೂರಿನಲ್ಲಿ ನಡೆಯಲಿದ್ದು, ಜಿಲ್ಲೆಯಿಂದ 5 ಸಾವಿರ ಜನರು ಅದರಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿಯವರು, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸೈಯದ್ ಮೊಹಿದ್ ಅಲ್ತಾಫ್, ಜಫ್ರುಲ್ಲಾಖಾನ್, ಬಿ.ಎಂ.ಫಾರೂಕ್ ಅವರು ಭಾಗವಹಿಸಲಿದ್ದಾರೆ. ರಾಜ್ಯದ್ಯಂತ ಸುಮಾರು 2 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ತಿಳಿಸಿದರು.

ಮುಸ್ಲಿಂ ಜನಾಂಗದ ಅಭಿವೃದ್ಧಿಗೆ ಜೆಡಿಎಸ್ ಪಕ್ಷ ಬದ್ಧವಾಗಿದೆ. ಈ ಹಿಂದೆ ಅಧಿಕಾರದಲ್ಲಿ ಇದ್ದಾಗ, ಅವರಿಗೆ ಸಾಮಾಜಿಕ ನ್ಯಾಯ ಒದಗಿಸಿತು. 1995ರಲ್ಲಿ ಗೃಹಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಲಾಯಿತು. ಹುಬ್ಬಳ್ಳಿ ಈದ್ಗಾ ಮೈದಾನ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಯಿತು ಎಂದು ಹೇಳಿದರು.ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಲೈಕೆ ರಾಜಕಾರಣ ಮಾಡುತ್ತಿವೆ. ಇವೆರಡೂ ಪಕ್ಷಗಳ ಆಡಳಿತವನ್ನು ಜನತೆ ನೋಡಿ ಬೆಸತ್ತಿದ್ದಾರೆ. ಬದಲಾವಣೆ ಬಯಸಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.

ಪಕ್ಷದಲ್ಲಿ ಯಾವುದೇ ರೀತಿಯ ಅಸಮಧಾನ ಇಲ್ಲ. ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಎಲ್ಲರ ಒಮ್ಮತದಿಂದ ನಡೆದಿದೆ. ಎಚ್.ಸಿ.ಗುಡ್ಡಪ್ಪ ಅವರನ್ನು ಯಾವುದೇ ಕಾರಣಕ್ಕೂ ಮೂಲೆ ಗುಂಪು ಮಾಡಿಲ್ಲ. ಏಕಾಂಗಿಯನ್ನಾಗಿಯೂ ಮಾಡಿಲ್ಲ. ಅಸಮಧಾನವೆನಿದ್ದರೂ ಇದ್ದರೆ ಅದನ್ನು ಕುಳಿತುಕೊಂಡು ಚರ್ಚಿಸಿ ಬಗೆಹರಿಸಲಾಗುತ್ತದೆ ಎಂದು ಅವರು ಹೇಳಿದರು.

 

Edited By

Shruthi G

Reported By

Shruthi G

Comments

Upload

Upload News

Create

Create Community