ಜಮೀರ್ ಅಹಮದ್ ಖಾನ್, ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿರುವುದೇಕೆ..?

07 Dec 2017 1:44 PM | Politics
98 0 Report

ಎರಡು ದಿನಗಳಿಂದ ಕೆ.ಸಿ.ವೇಣುಗೋಪಾಲ್ ಅವರು ಕೆಪಿಸಿಸಿ ಕಚೇರಿಯಲ್ಲಿ ಚುನಾವಣೆ ಸಿದ್ಧತೆಗಳ ಕುರಿತು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಜಮೀರ್ ಅಹಮದ್ ಖಾನ್ 'ಕುಮಾರಕೃಪಾ ಅತಿಥಿ' ಗೃಹದಲ್ಲಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದರು.

ಕೆ.ಸಿ.ವೇಣುಗೋಪಾಲ್ ಅವರ ಸೂಚನೆಯಂತೆಯೇ ಜಮೀರ್ ಅಹಮದ್ ಖಾನ್ ಅವರು ಭೇಟಿ ಮಾಡಿದ್ದರು. ಈ ಭೇಟಿಯ ಸಮಯದಲ್ಲಿ ಜೆಡಿಎಸ್‌ ಪಕ್ಷದಿಂದ ಅಮಾನತುಗೊಂಡ ಶಾಸಕರು ಕಾಂಗ್ರೆಸ್ ಸೇರುವ ದಿನಾಂಕದ ಬಗ್ಗೆ ಚರ್ಚೆಯಾಗಿದೆ. ಶೀಘ್ರದಲ್ಲೇ ಬಂಡಾಯ ಶಾಸಕರು ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಕಾರಣಕ್ಕೆ ಜೆಡಿಎಸ್, ಶಾಸಕರನ್ನು ಅಮಾನತು ಮಾಡಿತ್ತು. ಈ ಶಾಸಕರು ಈಗ ಕಾಂಗ್ರೆಸ್ ಸೇರಿ ಮುಂದಿನ ಚುನಾವಣೆಗೆ ಅದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.Edited By

Hema Latha

Reported By

Madhu shree

Comments

Upload

Upload News

Create

Create Community