ನಗರೇಶ್ವರ ಸೇವಾ ಸಮಿತಿಯಿಂದ ವೃದ್ಧರಿಗೆ ಮಾಶಾಸನ ವಿತರಣೆ






ದೊಡ್ಡಬಳ್ಳಾಪುರದಲ್ಲಿರುವ ನಗರೇಶ್ವರ ಸೇವಾ ಸಮಿತಿಯಿಂದ ವೃದ್ಧರಿಗೆ ಮಾಶಾಸನ ವಿತರಣೆಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರತೀ ತಿಂಗಳು ನಲವತ್ತು ವೃದ್ಧರಿಗೆ ವಿತರಿಸುವ ಪ್ರಶಂಸನೀಯ ಕಾರ್ಯವನ್ನು ಮಾಡುತ್ತಿದೆ ಎಂದು ಹಿರಿಯ ವಾಣಿಜ್ಯೋದ್ಯಮಿ ಟಿ.ಎಸ್. ಮಹದೇವಯ್ಯ ನಗರೇಶ್ವರ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.ಆಧುನಿಕತೆ ಹೆಚ್ಚಾದಂತೆ ವೃದ್ಧ ಪಾಲಕರು ಮಕ್ಕಳಿಗೆ ಭಾರವಾಗುತ್ತಿದ್ದಾರೆ, ಕಷ್ಟಪಟ್ಟು ಸಾಕಿದ ಹೆತ್ತವರ ಬಗ್ಗೆ ಮಕ್ಕಳಲ್ಲಿ ತಾತ್ಸಾರ ಮನೋಭಾವ ಹೊಂದುತ್ತಿದ್ದಾರೆ ಇದು ವಿಷಾದನೀಯ ಎಂದು ಹೇಳಿದರು. ಪ್ರಸ್ತುತ ಸಮಾಜದಲ್ಲಿ ಯುವಜನತೆ ಸಹಾಯ ಮನೋಭಾವ ಮರೆತಿದ್ದು, ಯಾಂತ್ರಿಕ ಬದುಕಿಗೆ ಅಂಟಿಕೊಂಡು ಸಾಮಾಜಿಕ ಬದ್ಧತೆ ಇಲ್ಲದೆ ಜೀವಿಸುತ್ತಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಬೇಕರಿ ಸತೀಶ್ ಹೇಳಿದರು. ಉದ್ಯಮಿಗಳಾದ ಶಿವಾನಂದಪ್ಪ, ಪುಟ್ಟರುದ್ರಪ್ಪ, ಶ್ಯಾಮು, ಖಜಾಂಚಿ ರಾಜೇಶ್, ಮುಖಂಡರಾದ ಸಾಗರ್, ದೀಪು, ರವಿ ಹಾಜರಿದ್ದರು.
Comments