ವಿಧಾನ ಸಭಾ ಚುನಾವಣೆಗೆ ಜೆಡಿಎಸ್ ನಿಂದ ಮತ್ತೊಂದು ಮಾಸ್ಟರ್ ಪ್ಲಾನ್
ವಿಧಾನ ಸಭಾ ಚುನಾವಣೆಗೆ ಜೆಡಿಎಸ್ ರಣತಂತ್ರ ಮಾಡಿಕೊಂಡು ಎ, ಬಿ, ಸಿ, ಎಂದು ಮೂರು ವಿಭಾಗಗಳಾಗಿ ಕ್ಷೇತ್ರಗಳ ವಿಂಗಡಣೆ ಮಾಡಿಕೊಂಡಿದೆ. ಎ ಕೆಟಗರಿಯಲ್ಲಿ 80, ಬಿ ಕೆಟಗರಿಯಲ್ಲಿ 90, ಸಿ ಯಲ್ಲಿ 54 ಕ್ಷೇತ್ರಗಳನ್ನು ವಿಂಗಡಣೆ ಮಾಡಿಕೊಂಡಿದೆ.
ಗೆದ್ದೇ ಗೆಲ್ಲುವ ಕ್ಷೇತ್ರಗಳು ಮಾತ್ರ ಎ ಕೆಟಗರಿಯಲ್ಲಿ ಹಾಕಲಾಗಿದೆ. ಕಷ್ಟಪಟ್ಟರೆ ಗೆಲ್ಲಬಹುದು ಎಂಬ ಕ್ಷೇತ್ರಗಳು ಬಿ ಕೆಟಗರಿಯಲ್ಲಿದೆ, ಎಂಬುದು ಜೆಡಿಎಸ್ ಮೂಲಗಳಿಂದ ತಿಳಿದು ಬಂದಿದೆ. ಎ ವಿಭಾಗದ ಕ್ಷೇತ್ರಗಳಲ್ಲಿ ಎಚ್ ಡಿಕೆ, ಎಚ್ ಡಿಡಿ ಪ್ರಚಾರ ಮಾಡಿದ್ರೆ, 224 ಕ್ಷೇತ್ರಗಳ ಪೈಕಿ 170 ಕ್ಷೇತ್ರಗಳತ್ತ ಮಾತ್ರ ಎಚ್ ಡಿಕೆ ಪ್ರಚಾರ ಮಾಡುತ್ತಾರೆ. ಬಿ ಕೆಟಗರಿಯ 90 ಕ್ಷೇತ್ರಗಳ ಜವಾಬ್ದಾರಿ ಎರಡನೇ ಹಂತದ ನಾಯಕರಿಗೆ ಸಿಗಲಿದೆ. ಸಿ ಕೆಟಗರಿಯಲ್ಲಿ ಬಹುತೇಕ ಕರಾವಳಿ ಕ್ಷೇತ್ರಗಳು ಈ ಕ್ಷೇತ್ರಗಳತ್ತ ಹೆಚ್ಚಿನ ಆದ್ಯತೆ ನೀಡದಿರಲು ತೀರ್ಮಾನ ಮಾಡಲಾಗಿದೆ ಎಂಬುದು ಜೆಡಿಎಸ್ ಮೂಲಗಳಿಂದ ತಿಳಿದು ಬಂದಿದೆ.
Comments