ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ವಿರೋಧ...ರೈತಪರ ಸಂಘಟನೆಗಳ ಆಕ್ರೋಶ...ಎತ್ತಿನಹೊಳೆ ಗ್ರಾಮಸಭೆ ರದ್ದು
ಎತ್ತಿನಹೊಳೆ ನೀರು ಸಂಗ್ರಹಕ್ಕೆ ಗಡಿ ಗ್ರಾಮ ಬೈರಗೊಂಡ್ಲು ಬಳಿ ನಿರ್ಮಿಸಲು ಉದ್ದೇಶಿಸಿರುವ ಜಲಾಶಯ ನಿರ್ಮಾಣಕ್ಕೆ ಸಾರ್ವಜನಿಕರು ಹಾಗೂ ವಿವಿದ ಸಂಘಟನೆಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಸಂಸದರು, ಅಧಿಕಾರಿಗಳು ಹಾಗೂ ಸಂತ್ರಸ್ತರ ನಡುವೆ ಮಂಗಳವಾರ ನಡೆಯಬೇಕಿದ್ದ ಗ್ರಾಮಸಭೆ ದಿಡೀರ್ ರದ್ದಾಗಿದೆ. ಜಲಾಶಯ ನಿರ್ಮಾಣ ಕುರಿತು ರೈತರೊಂದಿಗೆ ಸೋಮವಾರ ನಡೆದ ಪೂರ್ವಭಾವಿ ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ನಡೆಯಬೇಕಿದ್ದ ಮಹತ್ವದ ಸಭೆ ರದ್ದುಪಡಿಸಲಾಗಿದೆ. ಸೋಮವಾರ ನಡೆದ ಪೂರ್ವಬಾವಿ ಸಭೆಯಲ್ಲಿ ಬೈರಗೊಂಡ್ಲು ಜಲಾಶಯ ನಿರ್ಮಾಣ ವಿಶೇಷ ಭೂಸ್ವಾಧೀನ ಅಧಿಕಾರಿ ಆರತಿ ಆನಂದ್ ಎದುರೇ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಜಲಾಶಯ ನಿರ್ಮಾಣಕ್ಕೆ ಭೂಮಿ ನೀಡಿವುದಿಲ್ಲ, ನೀರು ಸಂಗ್ರಹಕ್ಕೆ ನಾವು ಸೂಚಿಸಿರುವ ಪರ್ಯಾಯ ಮಾರ್ಗ ಜಾರಿಗೆ ತನ್ನಿ ಎಂದು ಘೋಷಣೆ ಕೂಗುತ್ತಾ ಸಭೆ ಬಹಿಷ್ಕರಿಸಿದ್ದರಿಂದ ಮುಜಾಗೃತಾ ಕ್ರಮವಾಗಿ ಮಂಗಳವಾರ ನಡೆಯಬೇಕಿದ್ದ ಸಭೆ ರದ್ದಾಗಿದೆ.
ಎತ್ತಿನಹೊಳೆ ನೀರು ಸಂಗ್ರಹಿಸಲು ನಿರ್ಮಿಸಲಾಗುತ್ತಿರುವ ಬೈರಗೊಂಡ್ಲು ಜಲಾಶಯ ಅವೈಜ್ಞಾನಿಕ ನಿರ್ಧಾರವಾಗಿದ್ದು ಪೂರ್ವಿಕರು ನೀಡಿರುವ ಜಮೀನನ್ನು ನಮ್ಮ ಪ್ರಾಣ ಕೊಟ್ಟಾದರೂ ಉಳಿಸಿಕೊಳ್ಳುತ್ತೇವೆ ಹೊರತು ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ, ಮನೆ, ಭೂಮಿ ಕಳೆದುಕೊಳ್ಳಲಿರುವ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಎತ್ತಿನಹೊಳೆ ನೀರು ಸಂಗ್ರಹಣೆಯಿಂದ ಗರುಡಗಲ್ಲು, ಲಕ್ಕೇನಹಳ್ಳಿ ಗ್ರಾಮಗಳು ಮುಳುಗಡೆಯಾಗಲಿವೆ ಎಂದು ಅಧಿಕಾರಿಗಳು ನೀಡಿರುವ ಮಾಹಿತಿ.
ಆದರೆ ವಾಸ್ತವವಾಗಿ ನೀರು ನಿಲ್ಲುವ ಬೌಗೋಳಿಕ ಪ್ರದೇಶ ಗಮನಿಸಿದರೆ ದಾಸರಪಾಳ್ಯ, ನರಸಾಪುರ, ಮಚ್ಚೇನಹಳ್ಳಿ, ಸಿಂಗೇನಹಳ್ಳಿ. ಶ್ರೀರಾಮನಹಳ್ಳಿಗಳು ಕೂಡಾ ಮುಳುಗಡೆಯಾಗಲಿವೆ, ಆದರೆ ಅಧಿಕಾರಿಗಳು ಮಾತ್ರ ಈ ಗ್ರಾಮಗಳು ಭಾಗಶಃ ಮಾತ್ರ ಮುಳುಗಡೆಯಾಗಲಿವೆ ಎಂದು ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂಬುದು ರೈತ ಹಾಗೂ ರೈತಪರ ಸಂಘಟನೆಗಳ ಆಕ್ರೋಶ.
Comments