ಚುನಾವಣಾ ಪ್ರಚಾರಕ್ಕೆ ಚಾಲನೆ.... ಯಡಿಯೂರಪ್ಪ ಎಲ್ಲಿರುತ್ತಾರೋ ನಾನಲ್ಲಿ..... ಮಾಜಿ ಶಾಸಕ ನರಸಿಂಹಸ್ವಾಮಿ






ರಾಜಘಟ್ಟದ ಮಾರುತಿನಗರದಲ್ಲಿರುವ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಧಿಕೃತ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ನಮ್ಮ ನಾಯಕ ಬಿ.ಎಸ್. ಯಡೀಯೂರಪ್ಪ ಅವರು ಎಲ್ಲಿ ಇರುತ್ತಾರೋ ನಾನು ಅಲ್ಲೇ ಇರುತ್ತೇನೆ, ಬಿಜೆಪಿ ಬಿಡುವ ಸುದ್ದಿ ಸತ್ಯಕ್ಕೆ ದೂರವಾದುದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನೇ ಪಕ್ಷದ ಅಭ್ಯರ್ಥಿ, ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಹೇಳಿದರು.
೨೦೧೮ನೇ ಜನವರಿ ಎರಡನೇ ವಾರದಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪರಿವರ್ತನಾ ರ‍್ಯಾಲಿ ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ. ರ‍್ಯಾಲಿಗೆ ಸಂಬಂದಿಸಿದಂತೆ ಪೂರ್ವಭಾವಿಯಾಗಿ ಎಲ್ಲ ತಯಾರಿ ಮಾಡಿಕೊಳ್ಳಬೇಕಾಗಿ ಬಿಜೆಪಿ ಕಾರ್ಯಕರ್ತರು, ಮುಖಂಡರಿಗೆ ಮಾಜಿ ಶಾಸಕ ನರಸಿಂಹಸ್ವಾಮಿ ಕರೆ ನೀಡಿದರು.
ಇಂದಿನಿಂದಲೇ ಬೂತ್ ಮಟ್ಟದ ನಾಯಕರನ್ನು ಆಯ್ಕೆ ಮಾಡುವ ಪ್ರತಿಕ್ರಿಯೆಗೆ ಚಾಲನೆ ನೀಡುತ್ತೇನೆ, ಶಾಸಕನಾಗಿ ಇದ್ದಾಗ ಮಾಡಿದ್ದ ಕೆಲಸ ಮತ್ತು ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮನೆಮನೆಗೆ ತಲಿಪಿಸುವ ಕೆಲಸ ಮಾಡುತ್ತೇನೆ, ಕಾರ್ಯಕರ್ತರು ಪ್ರಾಮಾಣಿಕವಾಗಿ ಸ್ರಮವಹಿಸಿ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎನ್. ಹನುಮಂತೇಗೌಡ, ಮುಖಂಡರಾದ ಅಶ್ವಥನಾರಾಯಣ್ ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷ ಟಿ.ವಿ. ಲಕ್ಷ್ಮಿನಾರಾಯಣ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೋಡಿ ನರಸಿಂಹಮೂರ್ತಿ, ಮಹಿಳಾ ಘಟಕದ ಲೀಲಾ ಮಹೇಶ್, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ್, ಒಬಿಸಿ ತಾಲ್ಲೂಕು ಘಟಕದ ಜಿಲ್ಲಾಧ್ಯಕ್ಷ ರಾಂಕಿಟ್ಟಿ, ತಾಲ್ಲೂಕು ಕಾರ್ಯದರ್ಶಿ ರಾಜಘಟ್ಟ ಕಾಂತರಾಜ್, ಘಾಟಿ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಬಾಷೆಟ್ಟಿಹಳ್ಳಿ ಗ್ರಾಪಂ ಉಪಾಧ್ಯಕ್ಷ ಮುನಿಕೃಷ್ಣ, ಸದಸ್ಯ ಪ್ರೇಮ್ ಕುಮಾರ್ ಮತ್ತಿತರರು ಹಾಜರಿದ್ದರು.
Comments