ಸಮೀಕ್ಷೆ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ದರ್ಬಾರ್ ನಡೆಸಲಿದೆ
ಈ ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಪರ ಒಲವು ಇದೆ. ಯಾರನ್ನಾದರೂ ಅಭ್ಯರ್ಥಿ ಮಾಡಲಿ ಆದ್ರೆ ನಮ್ಮ ಮತ ಜೆಡಿಎಸ್ ಪಕ್ಷಕ್ಕೆ ಮಾತ್ರ ಎನ್ನುವುದು ಆ ಕ್ಷೇತ್ರದ ಹಿರಿ ಕಿರಿಯರ ಮನದಾಳದ ಮಾತು. ಅನಿತಾ ಕುಮಾರಸ್ವಾಮಿ ಅವರ ಮೇಲಿದೆ ಭಾರೀ ಅನುಕಂಪ ಕಳೆದ ಬಾರಿ ಅನಿತಾ ಅವರನ್ನು ಸೋಲಿಸಿದ್ದಕ್ಕೆ ಚನ್ನಪಟ್ಟಣದ ಜನರು ಈಗಲೂ ನೊಂದುಕೊಳ್ಳುತ್ತಿದ್ದಾರೆ.
ಒಳ್ಳೆಯ ಕೆಲಸ ಮಾಡುವ ಅಭ್ಯರ್ಥಿಯ ಬದಲು ಸ್ವಹಿತಕ್ಕಾಗಿ ಪಕ್ಷ ಬದಲಾವಣೆ ಮಾಡುವ ಯೋಗೇಶ್ವರ್ ಅವ್ರಿಗೆ ಗೆಲ್ಲಿಸಿದ್ದಕ್ಕೆ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಯೇ ನಿಂತು ಹೋಗಿದೆ ಹಾಗಾಗಿ ಮುಂದಿನ ಬೆಂಬಲ ನಾಡು ನುಡಿ , ಜಲ ರಕ್ಷಣೆ ಮಾಡುವ ಜೆಡಿಎಸ್ ಪಕ್ಷಕ್ಕೆ ಎಂದು ಜನ ತೀರ್ಮಾನ ಮಾಡಿಯಾಗಿದೆ. ಹೌದು.. ಚನ್ನಪಟ್ಟಣದ ಜನತೆ ಈ ಬಾರಿ ಅಲ್ಲಿಯ ಪಕ್ಷ ದಿಂದ ಪಕ್ಷಕ್ಕೆ ಜಂಪಿಂಗ್ ಮಾಡುವ ಶಾಸಕರಿಗೆ ಸೋಲಿಸಲು ರೆಡಿಯಾಗಿದ್ದಾರೆ. ಕಳೆದ ಬಾರಿ ಅನುಕಂಪದಿಂದ ಕೂದಲೆಳೆ ಅಂತರದಲ್ಲಿ ಜೆಡಿಎಸ್ ಪಕ್ಷದ ಅನಿತಾ ಕುಮಾರಸ್ವಾಮಿ ಅವರ ವಿರುದ್ದ ಸಮಾಜವಾದಿ ಪಕ್ಷದಿಂದ ಗೆದ್ದ ಯೋಗೇಶ್ವರ್ ಅವ್ರು ನಂತರ ರಾಜ್ಯಸಭೆ ಚುನಾವಣೆಯಲ್ಲಿ ಹಣಕ್ಕಾಗಿ ಕಾಂಗ್ರೆಸ್ ಸೇರಿದ್ರು ಮತ್ತೆ ಈಗ ಚುನಾವಣೆ ಹತ್ತಿರ ಆದಂತೆ ಅಲ್ಲಿಂದಲೂ ಕಾಲ್ಕಿತ್ತು ಬಿಜೆಪಿ ಸೇರಿದ್ದಾರೆ. ಆಳುವ ಸರಕಾರದ ಜೊತೆ ಗುರುತಿಸಿಕೊಂಡರೂ ಇವರು ಮಾಡಿದ ಕೆಲಸ ಅಷ್ಟಕ್ಕಷ್ಟೇ.. ದೇವೇಗೌಡರ ಕಾಲದಲ್ಲಿ ಮಂಜೂರು ಆದ ಸಣ್ಣ ನೀರಾವರಿ ಯೋಜನೆಗಳು ಇವರ ಕಾಲದಲ್ಲಿ ಮುಗಿದ್ದಕ್ಕೆ ಅದು ತನ್ನ ಸಾಧನೆ ಎಂದು ಹೇಳಿಕೊಂಡು ಓಡಾಡುತ್ತಿರುವ ಯೋಗೇಶ್ವರ್ ಅವ್ರಿಗೆ ಈ ಬಾರಿ ಸೋಲಿನ ರುಚಿ ತೋರಿಸಲು ಅಲ್ಲಿನ ಜನ ಕಾಯುತ್ತಿದ್ದಾರೆ ಎಂಬುದು ನಮ್ಮ ಸಮೀಕ್ಷೆ ಯಲ್ಲಿ ಕಂಡು ಬಂದ ಅಂಶಗಳು.
Comments