#ನನ್ನ_ಕನಸಿನ_ದೊಡ್ಡಬಳ್ಳಾಪುರ #ನನ್ನ_ಕನಸಿನ_ಕರ್ನಾಟಕ #ವಿಕಾಸದ_ಹಾದಿ.... ಬೆಳಿಗ್ಗೆ ಮತ್ತು ಸಂಜೆಯ ಪ್ರತಿದಿನದ ತೊಂದರೆಗೆ ಪರಿಹಾರ ಯಾವಾಗ? ಉತ್ತರಿಸುವವರು ಯಾರು? ಶಾಸಕರಾ? ಅಧಿಕಾರಿಗಳಾ?
ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಈ ಜಾಗವನ್ನು ದೊಡ್ಡಬಳ್ಳಾಪುರದ ಹೆಬ್ಬಾಗಿಲು ಸಹ ಎನ್ನಬಹುದು. ಹೇಳುವುದಕ್ಕೆ ಮಾತ್ರ ಹೆಬ್ಬಾಗಿಲು ಆದರೆ ದೊಡ್ಡ ವಾಹನಗಳು ಯಾವುದೂ ಈ ರಸ್ತೆಯ ಮೂಲಕ ದೊಡ್ಡಬಳ್ಳಾಪುರ ನಗರದೊಳಗೆ ಬಂದದ್ದು ಕಂಡೆ ಇಲ್ಲ! ಒಂದು ವೇಳೆ ಗೊತ್ತಿಲ್ಲದೆ ದೊಡ್ಡ ವಾಹನ ಯಾವುದಾದರೂ ಒಳ ಬರಲು ಪ್ರಯತ್ನಿಸಿದರೆ ಘಂಟೆಗಟ್ಟಲೆ ಸಂಚಾರ ಸ್ಥಗಿತಗೊಳ್ಳುತ್ತದೆ. ಈ ಸಮಸ್ಯೆ ಇವತ್ತು ನಿನ್ನೆಯದ್ದಲ್ಲಾ, ಸುಮಾರು ವರ್ಷಗಳಿಂದ ಈ ಜಾಗದಲ್ಲಿ ಸಂಚಾರ ತೊಂದರೆ ಆಗುತ್ತಲೇ ಇದೆ. ಇಲ್ಲಿನ ಸಂಚಾರ ತೊಂದರೆಯಿಂದ ಬೆಂಗಳೂರಿಗೆ ಹೋಗುವ ವಿದ್ಯಾರ್ಥಿ ಮತ್ತು ಕಾರ್ಮಿಕರು ಮಾತ್ರ ತಿಂಗಳಿಗೆ ಕನಿಷ್ಟ ಪಕ್ಷ 2 ಬಾರಿಯಾದರೂ ತಾವು ತಲುಪಬೇಕಿದ್ದ ಸಮಯಕ್ಕಿಂತ 1 ಘಂಟೆ ತಡವಾಗಿ ಸ್ಥಳ ಮುಟ್ಟುವ ಸ್ಥಿತಿ ಇನ್ನೂ ನಿಂತಿಲ್ಲ. ಈ ಜಾಗದ ಸಮಸ್ಯೆಗೆ ಪರಿಹಾರವಾಗಲಿ ಅಥವಾ ಪರ್ಯಾಯ ವ್ಯವಸ್ಥೆಯನ್ನಾಗಲಿ ಮಾಡಲು ಮಾತ್ರ ಅಧಿಕಾರಿ ವರ್ಗ ಮತ್ತು ಜನ ನಾಯಕರುಗಳಿಂದ ಸಾಧ್ಯವೇ ಆಗಿಲ್ಲ!
ದೊಡ್ಡಬಳ್ಳಾಪುರದಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿಯೇ ಈ ಪರಿಸ್ಥಿತಿ ಇರುವಾಗ ನಗರದೊಳಗಿನ ರಸ್ತೆಗಳು ಯಾವ ಮಟ್ಟಿಗೆ ಇರಬಹುದು..??
#ವಿಕಾಸದ_ಹಾದಿ
#ನನ್ನ_ಕನಸಿನ_ದೊಡ್ಡಬಳ್ಳಾಪುರ
#ನನ್ನ_ಕನಸಿನ_ಕರ್ನಾಟಕ
ವರದಿ: ಚೇತನ್ ಕೃಷ್ಣ, ಯುವ ಬ್ರಿಗೇಡ್.
Comments