ಕೊಟ್ಟ ಮಾತಿನಂತೆ ವಧುವರರಿಗೆ ಶುಭ ಹಾರೈಸಿದ ಕುಮಾರಣ್ಣ

05 Dec 2017 1:36 PM |
1757 Report

ತನ್ನ ವಿವಾಹಕ್ಕೆ ಎಚ್‌ಡಿಕೆ ಬರಲೇಬೇಕೆಂದು ಪಟ್ಟು ಹಿಡಿದು ಧರಣಿ ಕುಳಿತಿದ್ದ ಯುವಕನ ಮನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ವಧುವರರನ್ನು ಹಾರೈಸಿದ್ದಾರೆ.

ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ರವಿ ಎನ್ನುವವರು ಕುಮಾರಸ್ವಾಮಿ ವಿವಾಹಕ್ಕೆ ಬರಲೇಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದ. ಈತನಿಗೆ ತನ್ನ ಅಕ್ಕನ ಮಗಳೊಂದಿಗೆ ಡಿ.1ರಂದು ವಿವಾಹ ನಿಗದಿಯಾಗಿತ್ತು. ವಿವಾಹದ ಆಮಂತ್ರಣ ಪತ್ರಿಕೆಯನ್ನು ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ತಲುಪಿಸಿದ್ದ. ಆದರೆ, ಗ್ರಾಮದ ಮುಖಂಡರೊಬ್ಬರು ಮದುವೆಗೆ ಅವರನ್ನು ಕರೆತರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ರವಿ ಪ್ರತಿಭಟನೆ ನಡೆಸಿದ್ದ.ಪ್ರತಿಭಟನೆ ಮಾಹಿತಿ ತಿಳಿದು ರವಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, ಮದುವೆಗೆ ಬರಲಾಗುವುದಿಲ್ಲ. ಆದ್ರೆ ಮದುವೆಯಾದ ನಂತರ ಮನೆಗೆ ಬರುತ್ತೇನೆ ಎಂದು ಭರವಸೆ ನೀಡಿದ್ದರು. ತನ್ನ ನೆಚ್ಚಿನ ನಾಯಕನ ಭರವಸೆಯಿಂದ ರವಿ ಪ್ರತಿಭಟನೆ ಕೈಬಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಕೊಟ್ಟ ಮಾತಿನಂತೆ ಇಂದು ಅಭಿಮಾನಿ ಮನೆಗೆ ಆಗಮಿಸಿರುವ ಕುಮಾರಸ್ವಾಮಿ ಅವರು, ನವ ವಧುವರರಿಗೆ ಶುಭ ಕೋರಿದ್ದಾರೆ.

Edited By

Shruthi G

Reported By

hdk fans

Comments