ಕರ್ನಾಟಕರತ್ನ ಡಾ॥ರಾಜ್ ಕುಮಾರ್ ಕನ್ನಡ ಯುವಕರ ಸಂಘ, ದೊಡ್ಡಬಳ್ಳಾಪುರ 62ನೇ ಕನ್ನಡ ರಾಜ್ಯೋತ್ಸವ ಮತ್ತು 23ನೇ ಸಂಘದ ವಾರ್ಷಿಕೋತ್ಸವ





ಕರ್ನಾಟಕರತ್ನ ಡಾ॥ರಾಜ್ ಕುಮಾರ್ ಕನ್ನಡ ಯುವಕರ ಸಂಘ ಸಿನಿಮಾರಸ್ತೆ, ಇವರಿಂದ 62ನೇ ಕನ್ನಡ ರಾಜ್ಯೋತ್ಸವ ಮತ್ತು 23ನೇ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ನಗರಸಭಾ ಸದಸ್ಯರಾದ ಶಿವಶಂಕರ್, ಕನ್ನಡಪರ ಹೋರಾಟಗಾರರಾದ ಆಂಜಿನಪ್ಪ, ವೆಂಕಟೇಶ್, ಚೌಡರಾಜ್ ಭಾಗವಹಿಸಿದ್ದರು. ಕಾರ್ಯಕ್ರದಲ್ಲಿ "ಯೋಗದೀಪಿಕ ಯೋಗಕೇಂದ್ರ" ದ ಮಕ್ಕಳು ಹಲವು ಬಗೆಯ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿದರು, ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಹಾಗೂ ರಸಮಂಜರಿ ಏರ್ಪಡಿಸಲಾಗಿತ್ತು, ಸಂಘದ ಪದಾದಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಭಾಗವಹಿಸಿದ್ದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
Comments