ಮಹಿಳಾ ಸಮಾಜದ ನಿರ್ದೇಶಕಿಯರಾಗಿ ಆಯ್ಕೆಯಾದವರಿಗೆ ಮಾಜಿ ಶಾಸಕ ಜೆ. ನರಸಿಂಹಸ್ವಾಮಿಯವರಿಂದ ಅಭಿನಂದನೆ
ದೊಡ್ಡಬಳ್ಳಾಪುರದ ಮಹಿಳಾ ಸಮಾಜದ ನಿರ್ದೇಶಕಿಯರಾಗಿ ಆಯ್ಕೆಯಾದ ಎಂ.ಕೆ. ವತ್ಸಲ, ಬಿ.ಎ.ಗಿರಿಜ, ಎನ್. ಗೌರಮ್ಮ ಅವರನ್ನು ಮಾಜಿ ಶಾಸಕ ಜೆ. ನರಸಿಂಹಸ್ವಾಮಿಯವರು ಅಭಿನಂದಿಸಿ ಸನ್ಮಾನಿಸಿದರು. ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುವಂತೆ ಹೇಳಿದರು. ನಗರಸಭಾ ಸದಸ್ಯರಾದ ಹೆಚ್.ಎಸ್. ಶಿವಶಂಕರ್ ಮತ್ತಿತರ ಮುಖಂಡರು ಹಾಜರಿದ್ದರು.
Comments