ಹನುಮ ಜಯಂತಿ ಪ್ರಯುಕ್ತ ನೆಲದ ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ





ದೊಡ್ಡಬಳ್ಳಾಪುರ ನಗರದಲ್ಲಿರುವ ಶ್ರೀ ನೆಲದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮಜಯಂತಿ ಮಹೋತ್ಸವ ಪ್ರಯುಕ್ತ ಆಂಜನೇಯಸ್ವಾಮಿ ಟ್ರಸ್ಟ್ ವತಿಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ೫ರಿಂದ ೭ರ ವರೆಗೆ ಸ್ವಾಮಿಯವರಿಗೆ ಅಭಿಷೇಕ, ಮಹಾಮಂಗಳಾರತಿ ಮತ್ತು ಪ್ರಸಾದವಿನಿಯೋಗ, ೧೦-೩೦ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಮಂಗಳವಾದ್ಯಗಳ ಸಮೇತ ಶ್ರೀ ಸ್ವಾಮಿಯವರ ಉತ್ಸವ ಹಾಗೂ ಸಂಜೆ ೬-೩೦ಕ್ಕೆ ಸ್ಯಾಕ್ಸೋಫೋನ್: ಶ್ರೀ ಶ್ರೀನಿವಾಸಕುಮಾರ್, ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರು, ಚಿತ್ತೂರು. ಡೋಲು: ಶ್ರೀ ಟಿ,ಆರ್. ರಘು, ತುಮಕೂರು, ಶ್ರೀ ಆರ್. ಮಂಜುನಾಥ್, ದೊಡ್ಡಬಳ್ಳಾಪುರ, ಇವರಿಂದ ಏರ್ಪಡಿಸಿತ್ತು. ಸಾವಿರಾರು ಭಕ್ತರು ಬೆಳಿಗ್ಗೆಯಿಂದಲೇ ಶ್ರೀ ಸ್ವಾಮಿಯವರ ದರ್ಶನ ಪಡೆದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯದರ್ಶಿ ಸೀತಾರಾಂ, ಸಹಕಾರ್ಯದರ್ಶಿ ಶ್ರೀಕಾಂತ್, ಖಜಾಂಚಿ ಬಿ.ಆರ್. ವಿಶ್ವನಾಥ್, ಟ್ರಸ್ಟೀ ಗಳಾದ ಶ್ರೀಧರ್, ಗೋವಿಂದಶೆಟ್ಟಿ, ನಾರಾಯಣ್, ಪವನ್ ಗುಪ್ತ ಪಾಲ್ಗೋಂಡಿದ್ದರು.
Comments