ಮಗ್ಗದೂರಿನ ಕಣ್ಣಪ್ಪಗಳು…. ಇವರ ಕಣ್ಣಿಗೆ ಸಾವಿಲ್ಲ






ದೊಡ್ಡಬಳ್ಳಾಪುರ ನಗರ ಸಭೆಯ ಸದಸ್ಯರು ಹಾಗೂ ಜಿ.ಕೆ.ಶಾಲೆಯ ಕಾರ್ಯದರ್ಶಿಯವರಾದ 56 ವರ್ಷದ ವಯಸ್ಸಿನ ಶ್ರೀಯುತ.ಕೆ.ಜಿ.ರಘುರಾಮ್ ರವರು ವಿಧಿವಶರಾಗಿದ್ದಾರೆ, ಮತ್ತು ದೊಡ್ಡಬಳ್ಳಾಪುರದ ಕುಚ್ಚಪ್ಪನಪೇಟೆ ನಿವಾಸಿ, 62 ವರ್ಷ ವಯಸ್ಸಿನ ಶ್ರೀ. ಎಲ್.ಎನ್.ನಂಜುಂಡಮೂರ್ತಿ ರವರ ವಿಧಿವಶರಾಗಿದ್ದಾರೆ ಶ್ರಿಯುತರ ಕಣ್ಣುಗಳನ್ನು ಅವರ ಕುಟುಂಬದವರು ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಿ ಸಾವಿನಲ್ಲೂ ಮಾನವೀಯತೆಯನ್ನು ಮೆರೆದಿದ್ದಾರೆ. ಅಗಲಿದ ಅವರ ಆತ್ಮಕ್ಕೆ ಚಿರಶಾಂತಿಯನ್ನು ಮತ್ತು ಅವರ ಅಗಲಿಕೆಯಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ಈ ಪವಿತ್ರ ಕಾರ್ಯದಲ್ಲಿ ಭಾಗಿಗಳಾದ ಡಾIIರಾಜ್ ಕುಮಾರ್ ನೇತ್ರಸಂಗ್ರಹಣಾ ಕೇಂದ್ರ - ಅಭಿಷೇಕ್ ನೇತ್ರಧಾಮ, ಡಾIIಕೆ.ವಿ.ಕಾಂತಿಮತಿ, ಸ್ವಾಮಿ ವಿವೇಕಾನಂದ ಶಾಲೆಯ ಆರ್.ಲಕ್ಷ್ಮೀನಾರಾಯಣ, ಟಿ.ವಿ.ರವಿ, ಶರತ್ ಬಾಬು, ನೇತ್ರದಾನದಲ್ಲಿ ಭಾಗಿಗಳಾದ ಕುಟುಂಬದ ಎಲ್ಲಾ ಸದಸ್ಯರಿಗೂ ಭಗವಂತನು ಒಳ್ಳೆಯದನ್ನು ಮಾಡಲಿ.ಇದು ನಮ್ಮ 870 ನೇ ನೇತ್ರದಾನ. ಎಂ.ಬಿ.ಗುರುದೇವ ಛೇರ್ಮನ್, ಡಾIIರಾಜ್ ಕುಮಾರ್ ನೇತ್ರಸಂಗ್ರಹಣಾ ಕೇಂದ್ರ- ಅಭಿಷೇಕ್ ನೇತ್ರಧಾಮ, ಲಯನ್ಸ್ ಕ್ಲಬ್, ಎಂ.ಎ.ಬಿ.ಎಲ್. ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಶಾಲೆ ದೊಡ್ಡಬಳ್ಳಾಪುರ.
ನೇತ್ರದಾನಕ್ಕೆ ಸಂಪರ್ಕಿಸಿ –
9742202650, 9036797177, 9902884008, 9844179963
ವರದಿ: ನಟರಾಜ್ ನಾಗದಳ
Comments