#ನನ್ನ_ಆರೋಗ್ಯ_ನನ್ನ_ಹಕ್ಕು #ನನ್ನ_ಕನಸಿನ_ದೊಡ್ಡಬಳ್ಳಾಪುರ #ನನ್ನ_ಕನಸಿನ_ಕರ್ನಾಟಕ ಪ್ರಾಥಮಿಕ ಆರೋಗ್ಯ ಕೇಂದ್ರ ಹೊಸಹಳ್ಳಿ ದೊಡ್ಡಬಳ್ಳಾಪುರ ತಾಲ್ಲೂಕು.

02 Dec 2017 2:56 PM |
468 Report

ಹೇಳುವುದಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಆದರೆ ಅದರ ಸ್ಥಿತಿ ಮಾತ್ರ ಚಿಂತಾಜನಕ. ಹೊಸಹಳ್ಳಿ ಸುತ್ತಮುತ್ತಲಿನ 18 ಹಳ್ಳಿಗಳಿಗಾಗಿ ಇರುವುದು ಇಂದೊಂದೇ ಆರೋಗ್ಯ ಕೇಂದ್ರ. ರೋಗಿಗಳಿಗೆ ಸರಿಯಾದ ಬೆಡ್ ವ್ಯವಸ್ಥೆ ಇಲ್ಲ, ವೈದ್ಯರು ಬರೆದುಕೊಟ್ಟ ಎಲ್ಲ ಔಷಧಿ ಸಿಗುವ ಔಷಧಾಲಯ ಮೊದಲೇ ಇಲ್ಲ! ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ಉತ್ತಮವಾದ ವಸ್ತುಗಳಿಲ್ಲ, ಶೌಚಾಲಯವಿದೆ ಆದರೆ ಬಾಗಿಲು ಹಾಕುವುದುಕ್ಕಾಗುವುದಿಲ್ಲ! ಸಮಸ್ಯೆ ಹೇಳುತ್ತ ಹೋದರೆ ಮತ್ತಷ್ಟು ಮಗದಷ್ಟು! ಕೇವಲ ಒಂದು ಚಿಕ್ಕ ಆರೋಗ್ಯ ಕೇಂದ್ರದಲ್ಲಿಯೇ ಇಷ್ಟು ಸಮಸ್ಯೆಗಳಿವೆ ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಜನರ ಸೇವೆಗಾಗಿ ಸರ್ಕಾರ ಒಬ್ಬ ವೈದ್ಯ, ನಾಲ್ವರು ದಾದಿಯರು ಮತ್ತು ಒಬ್ಬ ಫಾರ್ಮಾಸಿಸ್ಟ್, ಒಬ್ಬ ಲ್ಯಾಬ್ ಟೆಕ್ನಿಶಿಯನ್ ಮತ್ತು ಮೂವರು ಸಪೋರ್ಟಿಂಗ್ ಸ್ಟಾಫ್ ನಿಯೋಜಿಸಿದೆ ಆದರೆ ಅಲ್ಲಿನ ಜನರು ಮಾತ್ರ ಆರೋಗ್ಯ ಕೆಡುತ್ತಿದ್ದಂತೆ ದೊಡ್ಡಬಳ್ಳಾಪುರ ನಗರದ ಕಡೆ ಬರುವುದು ಮಾತ್ರ ನಿಂತಿಲ್ಲ. ವರದಿ: ಚೇತನ್ ಕೃಷ್ಣ, ಯುವ ಬ್ರಿಗೇಡ್ #ನನ್ನ_ಆರೋಗ್ಯ_ನನ್ನ_ಹಕ್ಕು #ನನ್ನ_ಕನಸಿನ_ದೊಡ್ಡಬಳ್ಳಾಪುರ #ನನ್ನ_ಕನಸಿನ_ಕರ್ನಾಟಕ

Edited By

Ramesh

Reported By

Ramesh

Comments